ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದ ರಾಷ್ಟ್ರೀಯ ಈಜುಪಟು ಸಾವು

ಮಂಗಳೂರು: ನಗರದ ಲೇಡಿಹಿಲ್‌ನ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಈಜು ಕೋಚ್, ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದ ರಾಷ್ಟ್ರೀಯ ಈಜು ಪಟು ಕೆ.ಚಂದ್ರಶೇಖರ್ ರೈ ಸೂರಿಕುಮೇರು (52) ಈಜುತ್ತಿದ್ದ ವೇಳೆ ಹೃದಯಾಘಾತವಾಗಿ ಭಾನುವಾರ ಮೃತಪಟ್ಟಿದ್ದಾರೆ.

ಬೆಳಗ್ಗೆ ಈಜುಕೊಳಕ್ಕೆ ಬಂದಿದ್ದ ಚಂದ್ರಶೇಖರ್ ಅವರು ನಿರ್ವಹಣ ಕೆಲಸದವರು ಬರುವ ವರೆಗೆ ಈಜಾಡಲು ನಿರ್ಧರಿಸಿ ಕೊಳಕ್ಕೆ ಇಳಿದಿದ್ದಾರೆ. ನಿರ್ವಹಣೆಯ ಕೆಲಸಗಳಿಗಾಗಿ ಈಜು ಕೊಳಕ್ಕೆ ರಜೆಯಿದ್ದ ಕಾರಣ, ಇತರ ಕೋಚ್‌ಗಳೂ ಬಂದಿರಲಿಲ್ಲ. ಸ್ವಲ್ಪ ಹೊತ್ತು ಈಜಾಡಿದ ಬಳಿಕ, ನೀರಿನಡಿಯಲ್ಲಿ ಈಜುವ ಉದ್ದೇಶದಿಂದ ಕಾವಲು ಸಿಬಂದಿಯ ಬಳಿ ಟೈಮರ್ ಕೊಟ್ಟು ನೀರೊಳಗೆ ಈಜಿದ್ದಾರೆ. ಒಂದು ತುದಿಯಿಂದ ಇನ್ನೊಂದು ತುದಿಗೆ ತಲುಪಿದ ಅವರು ಮೇಲಕ್ಕೆ ಬಂದಿಲ್ಲ. ಈ ಬಗ್ಗೆ ಆತಂಕಗೊಂಡ ಕಾವಲು ಸಿಬಂದಿ ನೀರಿಗೆ ಇಳಿದು ಪರಿಶೀಲಿಸಿದಾಗ ಸ್ಪಂದಿಸಿಲ್ಲ. ತಕ್ಷಣ ಮೇಲಕ್ಕೆ ತಂದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಬಂಟ್ವಾಳದ ಮಾಣಿ ಸೂರಿಕುಮೇರು ಮೂಲದವರಾಗಿದ್ದು, ಮಂಗಳೂರಿನ ಕುದ್ರೋಳಿ ಬಳಿ ವಾಸವಾಗಿದ್ದರು. ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆ. ಚಂದ್ರಶೇಖರ್ ರೈ ಸೂರಿಕುಮೇರು ಸುಮಾರು ಐದಾರು ವರ್ಷದಿಂದ ಮನಪಾ ಈಜುಕೊಳದಲ್ಲಿ ಕೋಚ್ ಮತ್ತು ಲೈಫ್‌ಗಾರ್ಡ್ ಆಗಿದ್ದರು. ಉಸಿರು ಬಿಗಿ ಹಿಡಿದುಕೊಂಡು ನೀರಿನೊಳಗೆ ಈಜುವುದರಲ್ಲಿ ಪರಿಣತಿ ಹೊಂದಿದ್ದರು. ನಿತ್ಯ ಅಭ್ಯಾಸವನ್ನೂ ಮಾಡುತ್ತಿದ್ದರು. ದೈಹಿಕವಾಗಿಯೂ ಸದೃಢರಾಗಿದ್ದರು. 2023ರಲ್ಲಿ ಈಜುಕೊಳದಲ್ಲಿ ನೀರಿನೊಳಗೆ ಮುಳುಗಿ ಉಸಿರು ಕಟ್ಟಿಕೊಂಡು ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್‌ಸಾಲ್ಟ್ (ಮುಮ್ಮುಖ ತಿರುವು ಹೊಡೆಯುವುದು) ಮಾಡಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದರು. ಗಿನ್ನಿಸ್ ದಾಖಲೆ ಮಾಡುವ ನಿಟ್ಟಿನಲ್ಲಿಯೂ ತಯಾರಿ ನಡೆಸುತ್ತಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!