ತಂಗಿಯ ಹತ್ಯೆಯ ಪ್ರತೀಕಾರಕ್ಕೆ ಭಾವನನ್ನು ಬರ್ಬರವಾಗಿ ಹತ್ಯೆಗೈದ ಸಹೋದರ !

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚಿ ಗ್ರಾಮದ ಬಳಿ ಸಹೋದರಿಯ ಹತ್ಯೆಯ ಪ್ರತಿಕಾರವಾಗಿ ಭಾವನನ್ನೇ ಭೀಕರವಾಗಿ ಹತ್ಯೆಗೈದ ಘಟನೆ ನಡೆದಿದೆ.

ಚರಣ್ (23) ಹತ್ಯೆಗೊಳಪಟ್ಟ ವ್ಯಕ್ತಿ.

ಚರಣ್ ಮತ್ತು ಮೇಘನಾ ಪ್ರೀತಿಸಿ ಮದುವೆಯಾಗಿದ್ದು, ಮೇಘನಾ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಕ್ಕೆ ಚರಣ್ ಆಕೆಯನ್ನು 2024ರ ಏಪ್ರಿಲ್ 29ರಂದು ಕೊಂದು ಶವವನ್ನು ಕಾಲುವೆಗೆ ಎಸೆದಿದ್ದ.

ಮೂರು ತಿಂಗಳ ಹಿಂದಷ್ಟೇ ಚರಣ್ ಜಾಮೀನಿನಿಂದ ಹೊರಗಡೆ ಬಂದಿದ್ದು ಆತನನ್ನು ಕಂಡು ಮೇಘನಾ ಸಹೋದರ ಚರಣ್‌ ಅವರನ್ನು ಕೊಲೆ ಮಾಡಿದ್ದಾರೆ. ಕರಕೋಚಿ ಗ್ರಾಮಕ್ಕೆ ಬೈಕ್ ಮೇಲೆ ಬಂದು ವಾಪಸ್ ತೆರಳುವಾಗ ಚರಣನನ್ನು ಕೊಲೆ ಮಾಡಲಾಗಿದೆ.

ಲಕ್ಕವಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂತೋಷ ಮತ್ತು ಸಚಿನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!