ಭಾರತ ರಷ್ಯಾದ ಶಸ್ತ್ರಾಸ್ತ್ರ, ಖನಿಜ ತೈಲ ಆಮದು ಮಾಡಿರುವುದರಿಂದ ಕೋಪಗೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಪರಮ ಶತ್ರು ಪಾಕಿಸ್ತಾನದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಬಾಕಿಸ್ತಾನದಲ್ಲಿರು ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿ ಪಡಿಸುವುದು ಆಗಿದೆ.
ವಿಶೇಷವೆಂದರೆ ಪಾಕಿಸ್ತಾನದಲ್ಲಿ ಇದುವರೆಗೆ ಯಾವುದೇ ಖನಿಜ ತೈಲ ನಿಕ್ಷೇಪ ಪತ್ತೆಯಾಗಿಲ್ಲ. ಆದರೆ ಇತ್ತೀಚೆಗೆ ಪಾಕಿಸ್ತಾನದ ಡಾನ್ ಮಾಧ್ಯಮದ ಪ್ರಕಾರ ಪಾಕಿಸ್ತಾನ ತನ್ನ ಮೂರು ವರ್ಷಗಳಲ್ಲಿ ನಡೆಸಿದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ತನ್ನ ಸಮುದ್ರದ ಅಡಿಯಲ್ಲಿ 3,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ವ್ಯಾಪ್ತಿಯಲ್ಲಿ ಬೃಹತ್ ತೈಲ ನಿಕ್ಷೇಪಗಳನ್ನು ಪತ್ತೆ ಹಚ್ಚಿದೆಯಂತೆ. ಆದರೆ ಇದು ಇನ್ನೂ ಸ್ಪಷ್ಟಗೊಂಡಿಲ್ಲ. ಪಾಕಿಸ್ತಾನದಲ್ಲಿ ಅಮೆರಿಕಾ ತನ್ನ ಸ್ವಂತ ಖರ್ಚಿನಲ್ಲಿ ಸಮುದ್ರದಾಳವನ್ನು ಕೊರೆದು ತೈಲ ಮೇಲೆತ್ತುವುದು ಟ್ರಂಪ್ ಯೋಜನೆಯಾಗಿದೆ. ಇದೊಂದು ಪ್ರಕಾರ ಗುಡ್ಡ ಅಗೆದು ಇಲಿ ಹಿಡಿಯುವ ಕಥೆ ಎಂದು ಅಮೆರಿಕಾ ವಿರೋಧಿ ಬಣಗಳು ವ್ಯಂಗ್ಯವಾಡಿದೆ.
ಭಾರತದಿಂದ ಅಮೆರಿಕಾಕ್ಕೆ ರಫ್ತಾಗುವ ಸರಕಿನ ಮೇಲೆ ಟ್ರಂಪ್ 25ರಿಂದ 29 ಶೇಕಡಾ ಸುಂಕ ವಿಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತ ನಿಮ್ಮ ಎಫ್-35 ಫೈಟರ್ ಜೆಟ್ ಬೇಡ್ವೇ ಬೇಡ ಎಂದ ಕಡ್ಡಿ ಮುರಿದಂತೆ ಹೇಳುವ ಮೂಲಕ ಟ್ರಂಪ್‌ಗೆ ಅಡರಿದ್ದ ಪಿತ್ತವನ್ನು ಇಳಿಸಿದೆ. ಅಲ್ಲದೆ ರಷ್ಯಾದೊಂದಿಗೆ ನಾವು ಖರೀದಿಸುವ ಯಾವುದೇ ಸರಕುಗಳನ್ನು ಆಮದು ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ಮುಖಕ್ಕೆ ರಾಚಿದಂತೆ ಹೇಳಿಕೊಂಡಿದೆ. ಇದರಿಂದ ಮುಖಭಂಗಕ್ಕೀಡಾದ ಟ್ರಂಪ್ ಭಾರತದ ಪರಮ ಶತ್ರು ಪಾಕಿಸ್ತಾನದತ್ತ ಮುಖ ಮಾಡಿದ್ದಾರೆ. ಒಂದು ಕಾಲದಲ್ಲಿ ಇಡೀ ವಿಶ್ವವನ್ನೇ ಬುಗುರಿಯಂತೆ ಆಡಿಸುತ್ತಿದ್ದ ಅಮೆರಿಕಾ ಇಂದು ಜನಾಂಗೀಯ ಘರ್ಷಣೆಯಿಂದ ನಾಲ್ಕು ಹೋಳಾಗುವ ಹಂತ ತಲುಪಿದ್ದು, ಇದೀಗ ದೊಡ್ಡಣ್ಣನ ಆಟ ನಡೆಯುವುದಿಲ್ಲ. ಅಮೆರಿಕಾ ಒಂದು ಲೆಕ್ಕದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾದರೂ ಅಲ್ಲಿನ ಆಡಳಿತ ವ್ಯವಸ್ಥೆಯೇ ಡಮ್ಮಿ. ಒಂದರ್ಥದಲ್ಲಿ ರಹಸ್ಯ ಸಮಾಜದ ಹಸ್ತಕ್ಷೇಪದಲ್ಲಿ ಅಮೆರಿಕಾ ಆಡಳಿತ ವ್ಯವಸ್ಥೆ ಇದ್ದು, ಇದನ್ನು ಅರಗಿಸಲಾಗದೆ, ಅಥವಾ ಡೀಪ್ ಸೀಕ್ರೆಟ್ ಸೊಸೈಟಿಯ ಕೈಗೊಂಬೆಯಾಗಿರುವ ಟ್ರಂಪ್ ಗಾಯದ ಮೇಲೆ ಉಪ್ಪು ಹಚ್ಚಿಕೊಂಡ ಹಾಗೆ ನಡೆದುಕೊಳ್ಳುತ್ತಿದ್ದಾರೆ.
ಅಮೆರಿಕಾ ಸುಂಕ ಸಮರಕ್ಕೆ ಸೊಪ್ಪು ಹಾಕದ ಭಾರತ ಇದೀಗ ಚೀನಾದೊಂದಿಗೆ ಸಖ್ಯ ಬೆಳೆಸುವ ಯತ್ನದಲ್ಲಿದ್ದು, ತನ್ನ ವ್ಯಾಪರ ಕುದುರಿಸಲು ಹೊಸ ಹೊಸ ರಾಷ್ಟ್ರದ ಅನ್ವೇಷಣೆಯಲ್ಲಿ ತೊಡಗಿದೆ. ಮುಖ್ಯವಾಗಿ ಬ್ರಿಜಿಲ್, ಆಫ್ರಿಕಾದಂತಹಾ ದೇಶಗಳಲ್ಲಿ ವ್ಯಾಪಾರ ನಡೆಸಿ ಅಮೆರಿಕಾಕ್ಕೆ ಬುದ್ಧಿ ಕಲಿಸಲು ಭಾರತ ಮುಂದಾಗಿದೆ. ಇದಕ್ಕೆ ಪೂರಕ ಎಂಬಂತೆ ಬ್ರಿಕ್ಸ್ ರಾಷ್ಟ್ರಗಳೂ ಭಾರತದ ಕೈಜೋಡಿಸಿದೆ.
ಕೆಲವೇ ವರ್ಷಗಳಲ್ಲಿ ಭಾರತ ಖನಿಜ ತೈಲ ಆಮದು ನಿಲ್ಲಿಸಲಿದೆ:
ಯಾಕೆಂದರೆ ಭಾರತದ ತೈಲ ನಿಕ್ಷೇಪಗಳು ತುಂಬಾ ದೊಡ್ಡದಾಗಿದೆ – 2016 ರ ಹೊತ್ತಿಗೆ ಸಾಬೀತಾಗಿರುವ ಸುಮಾರು 4.8 ಶತಕೋಟಿ ಬ್ಯಾರೆಲ್‌ಗಳು – ಮತ್ತು ಇದು ಆಳ ಸಮುದ್ರ ನಿಕ್ಷೇಪಗಳಿಂದ ಕಚ್ಚಾ ತೈಲವನ್ನು ಹೊರತೆಗೆಯುವ ಮತ್ತು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ ಆದರೆ ಪಾಕ್‌ಗೆ ಗೆ ಹಾಗೆ ಮಾಡಲು ಸಾಧ್ಯವಿಲ್ಲ. ಭಾರತವು ಪಾಕಿಸ್ತಾನಕ್ಕಿಂತ ದಿನಕ್ಕೆ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ; ಉದಾಹರಣೆಗೆ, ಫೆಬ್ರವರಿ 2025 ರಲ್ಲಿ, ಭಾರತವು ದಿನಕ್ಕೆ 600,000 ಬ್ಯಾರೆಲ್‌ಗಳಿಗಿಂತ ಹೆಚ್ಚು ಅಥವಾ ಬಿಪಿಡಿ ಉತ್ಪಾದಿಸಿತು, ಮತ್ತು ಪಾಕ್ ಕೇವಲ 68,000 ಉತ್ಪಾದಿಸಿತು.
ಕೆಲವು ಅಂದಾಜಿನ ಪ್ರಕಾರ, 2024/25 ರಲ್ಲಿ ಭಾರತವು ಸುಮಾರು ಐದು ಮಿಲಿಯನ್ ಬಿಪಿಡಿ ಆಮದು ಮಾಡಿಕೊಂಡಿದೆ. ಮತ್ತು, ಹೋಲಿಸಿದರೆ, 2024 ರಲ್ಲಿ ಪಾಕ್ ಕೇವಲ 140,000 ಆಮದು ಮಾಡಿಕೊಂಡಿದೆ – ಅದರ ಐತಿಹಾಸಿಕ ಸರಾಸರಿ 163,000 – ಬಿಪಿಡಿಗಿಂತ ಸ್ವಲ್ಪ ಕಡಿಮೆ. ಭಾರತವು ಪಾಕ್‌ಗಿಂತ ಹೆಚ್ಚಿನ ನಿಕ್ಷೇಪಗಳನ್ನು ಹೊಂದಿದೆ ಮತ್ತು ದಿನಕ್ಕೆ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ಆದರೆ ಅದಕ್ಕೆ ಇನ್ನೂ ಹೆಚ್ಚಿನ ಅಗತ್ಯವಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಈ ವರ್ಷ 330,000 ಬಿಪಿಡಿ ಹೆಚ್ಚಳವನ್ನು ಊಹಿಸುತ್ತದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಪಾಕ್‌ಗೆ ಆ ಸಂಖ್ಯೆ 300,000 ಬಿಪಿಡಿ ದಾಟಲಿದೆ. ವ್ಯತ್ಯಾಸವು ಸ್ಪಷ್ಟವಾಗಿದೆ ಯಾಕೆಂದರೆ ಇನ್ನೂ ಸಾಬೀತುಪಡಿಸದ ತೈಲ ನಿಕ್ಷೇಪಗಳಿಗಾಗಿ ಪಾಕ್‌ಗೆ ಸಹಾಯ ಮಾಡುವ ಅಮೆರಿಕದ ನಿರ್ಧಾರದಿಂದ ನಿಜವಾಗಿಯೂ ಭಾರತದ ಮೇಲೆ ಪರಿಣಾಮ ಬೀರಬಾರದು ಎಂದು ಸೂಚಿಸುತ್ತದೆ. ಅಲ್ಲದೆ ಭಾರತ ತನ್ನ ಸಮುದ್ರದಾಳದಲ್ಲಿ ಅಪಾರ ಪ್ರಮಾಣದ ಕಚ್ಛಾ ತೈಲ ಪತ್ತೆಹಚ್ಚಿದ್ದು, ಇದನ್ನು ಎತ್ತುವ ಕಾರ್ಯ ಆರಂಭಗೊಂಡಿದೆ. ಕೆಲಸ ಪೂರ್ಣಗೊಂಡ ಮೇಲೆ ಭಾರತ ಕಚ್ಛಾತೈಲಕ್ಕಾಗಿ ಇನ್ನೊಂದು ದೇಶದ ಅವಲಂಬನೆ ಮಾಡಬೇಕಾಗಿಲ್ಲ. ರಷ್ಯಾದ ತೈಲವೂ ಬೇಕಾಗಿಲ್ಲ.
ಅಮೆರಿಕ ಭಾರತವನ್ನು ಬೆದರಿಸಲು ಪ್ರಯತ್ನಿಸುತ್ತಿದೆಯೇ?
ಪಾಕ್‌ನ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸುವ ಅಮೆರಿಕದ ನಿರ್ಧಾರದಿಂದ ಪಾಕಿಸ್ತಾನಕ್ಕೆ ಲಾಭವಿಲ್ಲ. ಯಾಕೆಂದರೆ ತನ್ನದೇ ನೆಲದ ತೈಲಕ್ಕೆ ಅಮೆರಿಕಾಕ್ಕೆ ದುಡ್ಡು ಕೊಡಬೇಕು. ಟ್ರಂಪ್ ನಿರ್ಧಾರದಿಂದ ಎರಡೂ ದೇಶಗಳಿಗೂ ಲಾಭವಿಲ್ಲ. ಹಾಗಾಗಿ ಅಮೆರಿಕಾದ ಈ ನಿರ್ಧಾರ ಭಾರತವನ್ನು ಮಣಿಸುವುದಷ್ಟೇ ಆಗಿದೆ. ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿ ಬದಲಿಗೆ ಅಮೆರಿಕದಿಂದ ಖರೀದಿಸುವಂತೆ ಮಾಡುವುದೇ ಟ್ರಂಪ್‌ನ ಮೆದುಳಲ್ಲಿ ಓಡಾಡುತ್ತಿರುವ ಯೋಜನೆಯಾಗಿದೆ. ಭಾರತ ಈ ಮುಂಚೆ ಅಮೆರಿಕಾದಿಂದ ತೈಲ ಖರೀದಿಸಲು ಮುಂದಾಗಿತ್ತು. ಆದರೆ ಟ್ರಂಪ್ ಹುಚ್ಚಾಟದಿಂದ ಸಿಟ್ಟಾದ ಭಾರತ ಆ ನಿರ್ಧಾರದಿಂದಲೂ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನದಿಂದ ಭಾರತಕ್ಕೆ ತೈಲವನ್ನು ಮಾರಾಟ ಮಾಡುವ ಯೋಜನೆ ಟ್ರಂಪ್ ಇದ್ದರೂ ಸಹ ಪಾಕಿಸ್ತಾನದಲ್ಲಿಅಷ್ಟು ಪ್ರಮಾಣದ ತೈಲ ನಿಕ್ಷೇಪವಿದೆ ಎಂದು ಇನ್ನೂ ಸಾಬೀತಾಗಿಲ್ಲ. ಒಂದಷ್ಟು ಸಿಕ್ಕರೂ ಅದು ಪಾಕಿಸ್ತಾನಕ್ಕೇ ಸಾಲದು ಹಾಗಾಗಿ ಟ್ರಂಪ್‌ನ ಈ ಹುಚ್ಚಾಟ ಗುಡ್ಡ ಅಗೆದು ಇಲಿ ಹಿಡಿಯಲು ಹೊರಟಂತಿದೆ.