ದಿಲ್ಲಿಯಲ್ಲಿ ಕರ್ತವ್ಯ ಭವನ ಉದ್ಘಾಟಿಸಿದ ಪ್ರಧಾನಿ !

ಹೊಸದಿಲ್ಲಿ : ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ದಿಲ್ಲಿಯಲ್ಲಿ ನಿರ್ಮಿಸಲಾದ ಕರ್ತವ್ಯ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ಸೆಂಟ್ರಲ್ ವಿಸ್ಟಾ ಯೋಜನೆಯಡಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಗೃಹ ಸಚಿವಾಲಯ ಮಾತ್ರ ಈಗ ಅದರ ಹಿಂದಿನ ನಾರ್ತ್ ಬ್ಲಾಕ್ ನಲ್ಲಿತ್ತು ಆದರೆ ಈಗ ಅದೂ ಕೂಡ ಕರ್ತವ್ಯ ಭವನಕ್ಕೆ ಸ್ಥಳಾಂತರಗೊಂಡಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ಸ್ಥಳಾಂತರಗೊಳ್ಳಲಿವೆ ಎಂದು ಹೇಳಲಾಗಿದೆ.

ಕರ್ತವ್ಯ ಭವನದ ಮೂರೂ ಕಟ್ಟಡಗಳ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ 3,690 ಕೋಟಿ ಮಂಜೂರು ಮಾಡಿತ್ತು. 2027ರ ಕರ್ತವ್ಯ ಭವನ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಹೇಳಲಾಗಿದೆ.

ಕರ್ತವ್ಯ ಭವನದಲ್ಲಿ 24 ಮುಖ್ಯ ಕಾನ್ಫರೆನ್ಸ್ ಕೊಠಡಿಗಳಿದ್ದು, ಒಂದೊಂದರಲ್ಲಿ 45 ಜನರು ಕುಳಿತುಕೊಳ್ಳಬಹುದಾಗಿದೆ. ತಲಾ 25 ಜನರಿಗೆ ಕುಳಿತುಕೊಳ್ಳಬಹುದಾದ 26 ಸಣ್ಣ ಕಾನ್ಫರೆನ್ಸ್ ಕೊಠಡಿಗಳು, ತಲಾ 9 ಜನರು ಕುಳಿತುಕೊಳ್ಳಬಹುದಾದ 67 ಸಣ್ಣ ಮೀಟಿಂಗ್ ಕೊಠಡಿಗಳು ಇರಲಿವೆ ಎಂದು ಹೇಳಲಾಗಿದೆ.

ಅಧಿಕಾರಿಗಳಿಗೆ, ಸಂದರ್ಶಕರಿಗೆ, ಐಡಿ ಕಾರ್ಡ್ ಇದ್ದರಷ್ಟೇ ಕರ್ತವ್ಯ ಭವನದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಭದ್ರತೆಗಾಗಿ ಕಾಂಪೌಂಡ್ ಗೋಡೆಯ ಮೇಲೆ ವಿದ್ಯುತ್ ಬೇಲಿಯನ್ನು ಕೂಡ ಹಾಕಲಾಗಿದೆ.

ಕರ್ತವ್ಯ ಭವನದಲ್ಲಿ ಕೆಲಸದ ಸ್ಥಳಗಳು ಇಕ್ಕಟ್ಟಾಗಿದ್ದು, ಗೌಪ್ಯತೆಗೆ ಧಕ್ಕೆ ತರುವಂತಿವೆ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ. ಈ ಕುರಿತು ಕೇಂದ್ರ ಸಚಿವಾಲಯ ಸೇವೆಯ (ಸಿಎಸ್ಎಸ್) ನೌಕರರು ಪ್ರಧಾನಿ ಕಾರ್ಯಾಲಯ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19

error: Content is protected !!