ಲಕ್ನೋ: ಐದು ತಿಂಗಳ ಹಿಂದೆ ಮರ್ಚೆಂಟ್ ನೇವಿ ಅಧಿಕಾರಿಯನ್ನು ಮದುವೆಯಾಗಿದ್ದ 32 ವರ್ಷದ ಮಹಿಳೆ ಮಧು ಸಿಂಗ್ ಎಂಬಾಕೆ ಲಕ್ನೋದ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಪತಿ ಪತ್ನಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದೇನೆ ಎಂದು ಹೇಳಿಕೊಂಡರೆ, ಮಧು ಸಿಂಗ್ ಅವರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಆಕೆಯನ್ನು ಹಿಂಸಿಸುತ್ತಿದ್ದ ಮತ್ತು ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯು ನೇಣು ಬಿಗಿದುಕೊಂಡು ಸಾವು ಸಂಭವಿಸಿದೆ ಎಂದು ದೃಢಪಡಿಸಿದೆ. ಆರೋಪಿ ಅನುರಾಗ್ ಸಿಂಗ್ ಅವರನ್ನು ಬಂಧಿಸಲಾಗಿದ್ದು, ದುರಂತದ ಮೂಲವನ್ನು ತಿಳಿದುಕೊಳ್ಳಲು ಪೊಲೀಸರು ಅವರನ್ನು ಪ್ರಶ್ನಿಸುತ್ತಿದ್ದಾರೆ.
ಮಧು ಈ ವರ್ಷ ಫೆಬ್ರವರಿ 25 ರಂದು ಅನುರಾಗ್ ಅವರನ್ನು ವಿವಾಹವಾದರು. ಅನುರಾಗ್ ಹಾಂಗ್ ಕಾಂಗ್ ಮೂಲದ ಹಡಗು ನಿರ್ವಹಣಾ ಸಂಸ್ಥೆಯಲ್ಲಿ ಎರಡನೇ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಮದುವೆಯ ಸಮಯದಲ್ಲಿ, ರದಕ್ಷಿಣೆಯಾಗಿ 15 ಲಕ್ಷ ರೂ.ಗಳನ್ನು ಕೇಳಿದ್ದರು ಆದರೆ ಮಧು ಕುಟುಂಬ 5 ಲಕ್ಷ ರೂ.ಗಳನ್ನು ಈತನಿಗೆ ವರದಕ್ಷಿಣೆಯಾಗಿ ಕೊಟ್ಟಿದ್ದರು. ಇದು ಸಾಕಾಗದೆ ಮಧುಗೆ ಹಿಂಸೆ ನೀಡಿದ್ದಾರೆ.
ಮದುವೆಯಾದ ಒಂದು ತಿಂಗಳೊಳಗೆ, ಅನುರಾಗ್ ಗೆ ಮಧು ಮೇಲೆ ಹಲ್ಲೆ ನಡೆಸಿದ್ದು, ಆಕೆ ತಮ್ಮ ಹೆತ್ತವರ ಮನೆಗೆ ಮರಳಿದ್ದರು. ಆನಂತರ ಆಕೆಯ ತಂದೆ ವರದಕ್ಷಿಣೆ ಪಾವತಿಸಿದಾಗ ಅನುರಾಗ್ ಅದನ್ನು ಹಿಂತಿರುಗಿಸಿ 15 ಲಕ್ಷಕ್ಕೆ ಪಟ್ಟು ಹಿಡಿದಿದ್ದ. ಅಲ್ಲದೆ ಮಗಳಿಗೆ ಚಿತ್ರಹಿಂಸೆ ಮುಂದುವರೆಯಿತು ಎಂದು ದುಃಖಿತ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅನುರಾಗ್ ಮಡದಿ ಮಧುವಿನ ಫೋನಿನ ಸೋಷಿಯಲ್ ಮೀಡಿಯಾ ಆಪ್‌ಗಳನ್ನು ಅನ್ ಇನ್‌ಸ್ಟಾಲ್ ಮಾಡಿಸಿದ್ದ. ಆನ್‌ಲೈನ್ ಆರ್ಡರ್ ಪರಿಶೀಲಿಸುತ್ತಿದ್ದ. ಗೆಳತಿಯರಿಗೂ ಫೋನ್ ಮಾಡಲು ಬಿಡುತ್ತಿರಲಿಲ್ಲ. ಇತ್ತೀಚೆಗೆ ಅಕ್ಕ ಅನುರಾಗ್ ಹಲ್ಲೆ ನಡೆಸಿರುವುದನ್ನು ಹೇಳಿದ್ದಳು ಎಂದು ಮಧು ತಂಗಿ ಪ್ರಿಯಾ ಹೇಳಿದ್ದಾಳೆ.
ಮನೆಗೆ ಬಂದರೆ, ಒಂದು ವರ್ಷದಲ್ಲೇ ಗಂಡನ ಬಿಟ್ಟು ಬಂದಿದ್ದಾಳೆ ಎಂದು ಊರವರು ಆಡಿಕೊಳ್ಳುತ್ತಾರೆ ಎಂದು ಭಾವಿಸಿ ಎಲ್ಲವನ್ನೂ ಸಹಿಸಿಕೊಂಡು ಕೊನೆಗೆ ಈ ಲೋಕದಿಂದಲೇ ಅಕ್ಕ ದೂರವಾದಳು ಎಂದು ಪ್ರಿಯಾ ಕಣ್ಣೀರು ಹಾಕಿದ್ದಾಳೆ.
ಅನುರಾಗ್ ವಿವಾಹೇತರ ಸಂಬಂಧ ಹೊಂದಿದ್ದನು ಮತ್ತು ಇತ್ತೀಚೆಗೆ ನಗರದ ಹೋಟೆಲ್‌ನಲ್ಲಿ ತನ್ನ ಮಾಜಿ ಗೆಳತಿಯೊಂದಿಗೆ ಒಂದು ರಾತ್ರಿ ಕಳೆದಿದ್ದನು ಎಂದು ಮಧುವಿನ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
“ನನ್ನ ಮಗಳು ಗರ್ಭಿಣಿಯಾಗಿದ್ದಳು, ಆದರೆ ಅವನು ಅವಳನ್ನು ಗರ್ಭಪಾತ ಮಾಡಿಸಲು ಒತ್ತಾಯಿಸಿದನು. ಆಗಸ್ಟ್ 4 ರಂದು ಸಂಜೆ 4.32 ಕ್ಕೆ, ಅವನು ಕರೆ ಮಾಡಿ ನನ್ನ ಮಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿದನು… ಅವನು ನನ್ನ ಮಗಳನ್ನು ಕೊಂದಿದ್ದಾನೆ” ಎಂದು ಮಧುವಿನ ತಂದೆ ಹೇಳಿದ್ದಾರೆ.
ಮಧು ನೇಣು ಬಿಗಿದ ವಿಷಯವನ್ನು ಅನುರಾಗ್ ಪೊಲೀಸರಿಗೆ ತಿಳಿಸಿದ್ದ. ಆದರೆ ಮಧು ಅವರ ಕುಟುಂಬಕ್ಕೆ ಸುಮಾರು ಐದು ಗಂಟೆಗಳ ನಂತರ ಅಂದರೆ ಸಂಜೆ 4.30 ರ ಸುಮಾರಿಗೆ ಮಾತ್ರ ಮಾಹಿತಿ ನೀಡಲಾಯಿತು. ಅನುರಾಗ್ ಅವರನ್ನು ಈಗ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.