ಐದರ ಬಾಲಕಿಯ ಅತ್ಯಾಚಾರಗೈದ ಮಸೀದಿ ಮೌಲ್ವಿ ಹಿಂಡಲಗಾ ಜೈಲಿಗೆ!

ಬೆಳಗಾವಿ: ಮಸೀದಿಯಲ್ಲಿ ಮೌಲ್ವಿಯಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿಯ ಮಸೀದಿಯಲ್ಲಿ ನಡೆದಿದ್ದು, 2023ರ ಅಕ್ಟೋಬರ್​ನಲ್ಲಿ ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯ ವೈರಲ್ ಬೆನ್ನಲ್ಲೇ ಮಹಾಲಿಂಗಪುರದ ಮೌಲ್ವಿ ತುಫೇಲ್ ಅಹ್ಮದ್ ದಾದಾಪೀರ್​​ (22) ಎಂಬಾತನನ್ನು ಮುರಗೋಡ ಪೊಲೀಸರು ಬಂಧಿಸಿ, ಹಿಂಡಲಗಾ ಜೈಲಿಗಟ್ಟಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಎಸಗುವ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಘಟನೆ ನಡೆದು ಎರಡು ವರ್ಷ ಕಳೆದರೂ ಭಯ ಪಟ್ಟು ಬಾಲಕಿ ಪೋಷಕರು ಕೇಸ್ ನೀಡಿರಲಿಲ್ಲ. ವಿಡಿಯೋ ಸಿಗುತ್ತಿದ್ದಂತೆ ಪೊಲೀಸರೇ ಬಾಲಕಿ ತಂದೆಯ ಮನವೊಲಿಸಿ ಕೇಸ್ ದಾಖಲಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಎಕ್ಸ್​ ಖಾತೆಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. 2023 ಅಕ್ಟೋಬರ್​ 5ರಂದು ಬೆಳಗಾವಿ ಜಿಲ್ಲೆಯ ಯರಗಟ್ಟಿಯ ಮಸೀದಿ ಒಂದರಲ್ಲಿ ಹೆಣ್ಣು ಮಗುವಿನ ಮೇಲೆ ನಡೆದಿರುವ ಈ ಅತ್ಯಾಚಾರಕ್ಕೆ ಆ ಮಗುವಿನ ತಂದೆ ನ್ಯಾಯ ಕೇಳುತ್ತಿದ್ದಾರೆ. ಮಸೀದಿಯವರು ಇವರನ್ನು ಹೆದರಿಸಿ ದೂರು ಕೊಡದಂತೆ ತಡೆದಿದ್ದಾರಂತೆ. ಈಗಲೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ದಯವಿಟ್ಟು ಕೂಡಲೇ ತನಿಖೆ ಮಾಡಿ ಕ್ರಮ ಜರುಗಿಸಿ ಆ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ತಂದೆಯ ಹೆಸರು ಕುತುಬುದ್ದೀನ್​ ಎಂದು ಪೋಸ್ಟ್ ಮಾಡಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!