ಎಂಆರ್‌ಪಿಎಲ್-ಒಎನ್‌ಜಿಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘದಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸನ್ಮಾನ

ಸುರತ್ಕಲ್: ಎಂಆರ್‌ಪಿಎಲ್ – ಒ.ಎನ್.ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ (ರಿ) ವತಿಯಿಂದ ಎಂ.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಹಾಗೂ ನಿವೃತ್ತ ಉದ್ಯೋಗಿಗಳಿಗೆ ಅಭಿವಂದನೆ ಎಂ.ಆರ್.ಪಿ.ಎಲ್ ಉದ್ಯೋಗಿಗಳ ರಿಕ್ರಿಯೇಷನ್ ಸಭಾಂಗಣದಲ್ಲಿ ಜರಗಿತು.

ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಘಟನೆಯ ಕಾರ್ಯಕ್ರಮವನ್ನು ಶ್ಲಾಘಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತಾಡಿದ ಅವರು ಎಂ.ಆರ್‌.ಪಿ‌.ಎಲ್. ಸಂಸ್ಥೆಯು ಕಾರ್ಮಿಕರಿಗೆ ಕೊಡುವ ಸವಲತ್ತುಗಳನ್ನು ಸರಿಯಾಗಿ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಖಾನೆಗಳು ಬೇಕು, ಅದೇ ಪ್ರಕಾರ ಸ್ಥಳೀಯರಿಗೆ ಪ್ರಾಶಸ್ತ್ಯವನ್ನೂ ನೀಡಬೇಕೆಂದು ಅಗ್ರಹಿಸಿದ ಅವರು ಸ್ಥಳೀಯರ ನ್ಯಾಯೋಚಿತ ಹೋರಾಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಲ್ಲದೆ, ಎಂ.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕೆಂಬ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾರತೀಯ ವಾಯು ಸೇನೆಯ ನಿವೃತ್ತ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಎಂ.ಆರ್.ಪಿ.ಎಲ್‌ನ ನಿರ್ದೇಶಕ ನಂದಕುಮಾರ್ ವಿ. ಪಿಳ್ಳೈ ರೊನಾಲ್ಡ್ ಫೆರ್ನಾಂಡಿಸ್, ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕರ್ ಜೋಗಿ, ಎಂ.ಆರ್.ಪಿ.ಎಲ್ ಮಾನೇಜ್ಮೆಂಟ್ ಸ್ಟಾಫ್ ಅಸೋಸಿಯಶನ್ ಅಧ್ಯಕ್ಷ ಸಂಪತ್ ರೈ, ಉಪಾಧ್ಯಕ್ಷ್ಯ ಡಾಕ್ಟರ್ ಸಂಪತ್, ಎಂ.ಆರ್.ಪಿ‌.ಎಲ್ ಯೂನಿಯನಿನ ಅಧ್ಯಕ್ಷ ಶರತ್ ಜೋಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಒಟ್ಟು 60 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ಉದ್ಯೋಗಿಗಳಾದ ಪುಷ್ಪರಾಜ್ ಅಡಪ್ಪ ಮತ್ತು ದಿಲೀಪ್ ಬಿ. ಆಳ್ವ ಅವರನ್ನು ಸನ್ಮಾನಿಸಲಾಯಿತು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಗವದ್ಗೀತ ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ ಪಡೆದ ಎಮ್‌.ಆರ್‌.ಪಿ‌.ಎಲ್ ಸಂಸ್ಥೆ ಉದ್ಯೋಗಿ ವಿನಯ್ ಭಟ್, ಹತ್ತನೇ ತರಗತಿಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸಾಧನೆಗೈದ ವಿದ್ಯಾರ್ಥಿ ಕುಮಾರಿ ಬಿಂದು ಎಂ ಸುವರ್ಣ, ಹಾಗೂ ಉತ್ತಮ ಸರಕಾರಿ ಮಹಿಳಾ ಉದ್ಯೋಗಿ ಎಂದು ರಾಷ್ಟ್ರ ಪ್ರಶಸ್ತಿ ಪಡೆದ ಪ್ರಮೀಳಾ ದೀಪಕ್ ಪೆರ್ಮುದೆ ಇವರನ್ನು ಸನ್ಮಾನಿಸಲಾಯಿತು.

ಎಂ.ಆರ್.ಪಿ.ಎಲ್ – ಒ.ಎನ್.ಜಿ.ಸಿ ಯೋಜನಾ ನಿರ್ವಸಿತರಾಗಿದ್ದು, ಉದ್ಯೋಗ ಹೊಂದಿರದ ಆರ್ಥಿಕ ದುರ್ಬಲರಾಗಿರುವ 5 ಕುಟುಂಬಗಳನ್ನು ಗುರುತಿಸಿ, ಅವರಿಗೆ ತಲಾ ಹತ್ತು ಸಾವಿರ ರೂ ಆರ್ಥಿಕ ಸಹಾಯ ನೀಡಲಾಯಿತು. ಎಂ.ಆರ್.ಪಿ.ಎಲ್ – ಒ.ಎನ್. ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ (ರಿ), ಇದರ ಅಧ್ಯಕ್ಷ ದಿನೇಶ್ ಬಿ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮೀಶ ಎಂ ಅಂಚನ್ ವರದಿ ವಾಚನ ಗೈದರು. ಜೊತೆ ಕಾರ್ಯದರ್ಶಿ ಗುರುರಾಜ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಎಮ್.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಕುಟುಂಬಗಳ 10 ಮತ್ತು 12 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ರೂ 5 ಸಾವಿರ ಪುರಸ್ಕಾರ ನೀಡಿದ ಎಮ್‌.ಆರ್‌.ಪಿ‌.ಎಲ್ ಸಂಸ್ಥೆಗೆ ಕೃತಜ್ಞತೆ ಅರ್ಪಿಸಲಾಯಿತು.

ಸುಧೀರ್ ಆಚಾರ್ಯ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಎಮ್.ಆರ್.ಪಿ.ಎಲ್ – ಒ.ಎನ್.ಜಿ.ಸಿ ನಿರ್ವಸಿತ ಉದ್ಯೋಗಿಗಳ ಕಲ್ಯಾಣ ಸಂಘ (ರಿ), ಇದರ ಸದಸ್ಯರಾದ ರಘುರಾಮ್ ತಂತ್ರಿ, ಜಯೇಶ್ ಗೋವಿಂದ್, ಜಯಪ್ರಕಾಶ್, ರಾಜ್ ಕುಮಾರ್, ಶಶಿ, ದಾಮೋದರ್ ಶೆಟ್ಟಿ, ಕಿರಣ್ ಕುಮಾರ್, ಶಿವಾನಂದ, ಕುಮಾರ್ ಡಿ ಅಂಚನ್, ಪ್ರಸನ್ನ ಕುಮಾರ್, ರತನ್, ಕಿಶೋರ್ ಶೆಟ್ಟಿ, ಗಿರೀಶ್, ಗಂಗಾಧರ್, ಜಯಲಕ್ಷ್ಮಿ ಶೆಟ್ಟಿ, ಸ್ಮಿತಾ ಭಂಡಾರಿ, ತೇಜೇಶ್, ಅವಿನಾಶ್ , ಶರತ್ ಉಪಸ್ಥಿತರಿದ್ದರು. ಶ್ರೀಶ ಎಂ ಕರ್ಮರನ್ ಹಾಗೂ ಪ್ರಾರ್ಥನಾ ಕಾರ್ಯಕ್ರಮ ನಿರೂಪಿಸಿದರು.

ಅಂತಿಮವಾಗಿ ನಾಗೇಶ್ ಕುಲಾಲ್ ಇವರ ತಂಡದವರಿಂದ ʻಪರಮಾತ್ಮೆ ಪಂಜುರ್ಲಿʼ ತುಳು ನಾಟಕ ಪ್ರದರ್ಶನ ನಡೆಯಿತು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!