ಮುಂಬಯಿ: ಬಿಗ್ ಬಾಸ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದೆ. ಸಲ್ಮಾನ್ ಖಾನ್ ಅವರೇ ಮತ್ತೆ ʼಬಿಗ್ ಬಾಸ್ -19ʼ ನಡೆಸಿಕೊಡಲಿದ್ದಾರೆ.
ಈಗಾಗಲೇ ʼಬಿಗ್ ಬಾಸ್ʼ ಶೋ ಪ್ರೋಮೊ ರಿಲೀಸ್ ಆಗಿದ್ದು, ಈ ಬಾರಿ ಮನೆಯೊಳಗೆ ರಾಜಕೀಯ ಎನ್ನುವ ಕಾನ್ಸೆಪ್ಟ್ ಇರಲಿದೆ ಎನ್ನಲಾಗುತ್ತಿದೆ.
ಬಿಗ್ ಬಾಸ್‌ಗೆ ಹೋಗುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಇದರಲ್ಲಿ ಕಿರುತೆರೆ ನಟ, ನಟಿಯರು, ಸೋಶಿಯಲ್ ಮೀಡಿಯಾ ಪ್ರಭಾವಿಗಳು ಸೇರಿದಂತೆ ಹಲವರು ಇದ್ದಾರೆ.
ಈ ನಡುವೆ ʼಬಿಗ್ ಬಾಸ್ ಸೀಸನ್ -10ʼರಲ್ಲಿ ಸಲ್ಮಾನ್ ಖಾನ್ ಜತೆ ಜಗಳವಾಡಿ ಒಂದೇ ವಾರದಲ್ಲಿ ದೊಡ್ಮನೆ ಆಟದಿಂದ ಹೊರಬಂದಿದ್ದಮಹಿಳಾ ಸ್ಪರ್ಧಿ ಪ್ರಿಯಾಂಕಾ ಜಗ್ಗ ಮತ್ತೆ ಬಿಗ್ ಬಾಸ್ ಬರಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಸಲ್ಮಾನ್ ಖಾನ್ ಜೊತೆಗಿನ ವೀಡಿಯೋಗಾಗಿ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ👇
https://x.com/SalluLicious/status/812376840266481664
ಈ ಬಗ್ಗೆ ಸ್ವತಃ ಪ್ರಿಯಾಂಕಾ ಅವರೇ ಫೇಸ್‌ಬುಕ್‌ನಲ್ಲಿ “10 ವರ್ಷಗಳ ಹಿಂದೆ, ನಾನು ಬಿಗ್ ಬಾಸ್ ಎಂಬ ಕಾರ್ಯಕ್ರಮದ ಭಾಗವಾಗಿದ್ದೆ. ಅದು ನನ್ನ ಜೀವನವನ್ನು ಬದಲಾಯಿಸಿತು. ಆದರೆ ಅದೆಲ್ಲವೂ ಸುಲಭವಾಗಿರಲಿಲ್ಲ. ನಾನು ನಿರೂಪಕ ಸಲ್ಮಾನ್ ಖಾನ್ ಜೊತೆ ಜಗಳವಾಡಿದೆ. ಇದರಿಂದಾಗಿ ನಾನು ಗ್ಲಾಮರ್ ಪ್ರಪಂಚದಿಂದ ದೂರವಾದೆ. ಆದರೆ ಈಗ, ಅನಿರೀಕ್ಷಿತವಾಗಿ… ಬಿಗ್ ಬಾಸ್ ಮತ್ತೆ ಕರೆ ಮಾಡಿದ್ದಾರೆ. ಈ ಸೀಸನ್ ನನ್ನನ್ನು ಅವರು ಮರಳಿ ಬರುವಂತೆ ಹೇಳಿದ್ದಾರೆ.” ಎಂದು ಬರೆದುಕೊಂಡಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19