ಮಂಗಳೂರು: ಮಂಗಳೂರು ಕ್ವಿಝಿಂಗ್ ಫೌಂಡೇಶನ್ ಬೆಳ್ಳಿ ಮಹೋತ್ಸವ ಆಚರಿಸುತ್ತಿದ್ದು, ಇದರ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಈ ಬಾರಿ ಆಗಸ್ಟ್ 10 ರ ಭಾನುವಾರ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಸೇಂಟ್ ಆಗ್ನೆಸ್ ಕಾಲೇಜಿನ ಅವಿಲಾ ಹಾಲ್‌ನಲ್ಲಿ ಎರಡು ವಿಭಾಗಗಳಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ ಎಂದು ಅಧ್ಯಕ್ಷ ಡಾ. ಅಣ್ಣಪ್ಪ ಕಾಮತ್ ಹೇಳಿದರು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತಾಡಿದ ಅವರು, ರಸಪ್ರಶ್ನೆಗಳು ಎರಡು ವಿಭಾಗಗಳಲ್ಲಿ ನಡೆಯಲಿವೆ. ಮೊದಲ ಸ್ಪರ್ಧೆ ಬೆಳಿಗ್ಗೆ 10 ಗಂಟೆಗೆ 10 ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ನಡೆಯಲಿದ್ದು, ಮತ್ತು ಇನ್ನೊಂದು ಸ್ಪರ್ಧೆ ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕರಿಗಾಗಿ ನಡೆಯಲಿದೆ. ಇತಿಹಾಸ, ಕ್ರೀಡೆ, ವಿಜ್ಞಾನ, ಮನರಂಜನೆ, ಪ್ರಚಲಿತ ವಿದ್ಯಮಾನಗಳು ಹಾಗೂ ಸಾಮಾನ್ಯ ಜ್ಞಾನ ಇರುವ ವಿಷಯಗಳನ್ನು ರಸಪ್ರಶ್ನೆ ಒಳಗೊಂಡಿದೆ ಎಂದು ಹೇಳಿದರು.
ನಮ್ಮದು ಮಂಗಳೂರಿನ 25 ವರ್ಷ ಹಳೆಯದಾದ ರಸಪ್ರಶ್ನೆ ಕ್ಲಬ್ ಆಗಿದ್ದು, ರಸಪ್ರಶ್ನೆ ಮತ್ತು ಜ್ಞಾನ ಹಂಚಿಕೆಯ ಸಂಸ್ಕೃತಿಯನ್ನು ಉತ್ತೇಜಿಸಲು ಸಮರ್ಪಿತರಾಗಿದ್ದೇವೆ. ನಮ್ಮ ಸದಸ್ಯರು ವಿವಿಧ ಹಿನ್ನೆಲೆಗಳಿಂದ ಬಂದವರಾಗಿದ್ದಾರೆ. ವೃತ್ತಿಪರರು, ವೈದ್ಯರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಒಗ್ಗೂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ MOF( ಮಂಗಳೂರು ಕ್ವಿಝಿಂಗ್ ಫೌಂಡೇಶನ್) ಹಲವಾರು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮತ್ತು ಭಾಗವಹಿಸುವ ಮೂಲಕ ಈ ಪ್ರದೇಶದಲ್ಲಿ ಈ ಸಂಸ್ಕೃತಿಯನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ವಿಶ್ವಾಸ್ ಕೆ. ಪೈ ಉಪಸ್ಥಿತರಿದ್ದರು.
ನೋಂದಣಿ ಮಾಡಲು ಆಸಕ್ತ ತಂಡಗಳು :
9902096914
7019944161
ಈ ಸಂಖ್ಯೆಗಳಿಗೆ whatspp ಮೂಲಕ ನೋಂದಾಯಿಸಿಕೊಳ್ಳಬಹುದು.