ಬೆಳ್ತಂಗಡಿ: ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂಬ ಜಯಂತ್ ಟಿ. ಆರೋಪದ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಬಂದ ಜಯಂತ್ ಅವರಿಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಎಸ್ಐಟಿ ಸೂಚನೆ ನೀಡಿತ್ತು. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಾಗಿರುವುದರಿಂದ ಅಲ್ಲೇ ಮೊದಲು ಕೇಸ್ ಕೊಡುವಂತೆ ಸೂಚನೆ ನೀಡಿದ ಹಿನ್ನೆಲೆ ದೂರು ದಾಖಲಿಸಿದ್ದಾರೆ. 15 ವರ್ಷ ಹಿಂದೆ ಇದ್ದ ಠಾಣಾಧಿಕಾರಿಯ ಮೇಲೆ ಜಯನ್ ಆರೋಪ ಮಾಡಿದ್ದು ಅಪ್ರಾಪ್ತ ಬಾಲಕಿಯ ಶವ ನೋಡಿದ್ದೆ. ನಾನು ಕಣ್ಣಾರೆ ಕಂಡಿದ್ದೇನೆ ನನ್ನ ಜೊತೆ ಸಾಕ್ಷಿಗಳು ಇದ್ದಾರೆ. ತನಿಖೆಯ ವೇಳೆ ನಾನು ಅವರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ.
2002-03 ರ ಅವಧಿಯಲ್ಲಿ ರಾಜ್ಯ ಹೆದ್ದಾರಿ ಸಂಖ್ಯೆ 37ರ ಬಳಿ ಇರುವ ಅರಣ್ಯ ಪ್ರದೇಶದಲ್ಲಿ 13ರಿಂದ 15 ವರ್ಷ ಪ್ರಾಯದ ಹೆಣ್ಣುಮಗುವಿನ ಶವವನ್ನು ಹೂತು ಹಾಕಲಾಗಿದೆ. ವಾರದ ನಂತರ ಪೊಲೀಸರು ಸ್ಥಳಕ್ಕೆ ಬಂದು ಅದು ಸುಮಾರು 35 ರಿಂದ 40 ವರ್ಷ ಪ್ರಾಯದ ಹೆಂಗಸು ಎಂಬಂತೆ ಸ್ಥಳೀಯರಿಗೆ ತಿಳಿಸಿದ್ದರು. ಶವವು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯದ್ದೆಂದು ಹೇಳಿ, ಜಿಗುಪ್ಸೆಯಿಂದ ಸಾವು ಕಂಡಿದ್ದಾಳೆ ಎಂಬ ರೂಪದಲ್ಲಿ ಘಟನೆ ಮುಚ್ಚಿಹಾಕಿದ್ದಾರೆ. ಶವವನ್ನು ಕೇವಲ ಒಂದು ಅಥವಾ ಎರಡು ಫೀಟ್ ಆಳದ ಹೊಂಡದಲ್ಲಿ ಹೂತು ಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.