ಭಾರತಕ್ಕೆ ರೋಚಕ 6 ರನ್‌ಗಳ ಜಯ

ಲಂಡನ್‌: ತೆಂಡುಲ್ಕರ್‌- ಆ್ಯಂಡರ್‌ಸನ್‌ ಟೆಸ್ಟ್‌ ಸರಣಿಯ ಐದನೇ ಪಂದ್ಯದ ಐದನೇ ದಿನ ಭಾರತ- ಇಂಗ್ಲೆಂಡ್‌ ವಿರುದ್ಧ ರೋಚಕ 6 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ 2-2 ರಲ್ಲಿ ಸಮಬಲಗೊಂಡಿದೆ. ಓವಲ್‌ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೀಡಿದ್ದ ಬೃಹತ್‌ ರನ್‌ ಬೆನ್ನಟ್ಟಿದ ಇಂಗ್ಲೆಂಡ್‌ ಅಂತಿಮವಾಗಿ 85.1 ಓವರ್‌ಗಳಲ್ಲಿ 367 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗೆಲುವಿಗೆ 374 ರನ್‌ಗಳ ಬೃಹತ್‌ ಗುರಿಯನ್ನು ಭಾರತ ನೀಡಿತ್ತು. ಬೃಹತ್‌ ಮೊತ್ತವನ್ನು ಗುರಿ ಬೆನ್ನತ್ತಿದ ಇಂಗ್ಲೆಂಡಿಗೆ ಕೊನೆಯ ದಿನ 4 ವಿಕೆಟ್‌ ಸಹಾಯದಿಂದ 35 ರನ್‌ ಬೇಕಿತ್ತು. ನಾಲ್ಕನೇಯ ದಿನ ಅಜೇಯರಾಗಿದ್ದ ಸ್ಮಿತ್‌ ನಿನ್ನೆಯ ಮೊತ್ತವಾದ 2 ರನ್‌ಗೆ ಸಿರಾಜ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಔಟಾದರೆ ಓವರ್‌ಟನ್‌ 8 ರನ್‌ಗಳಿಸಿ ಸಿರಾಜ್‌ ಎಲ್‌ಬಿ ಔಟಾದರು. ಜೋಶ್‌ ಟಂಗ್‌ ಅವರು ಪ್ರಸಿದ್ಧ್‌ ಕೃಷ್ಣ ಬೌಲ್ಡ್‌ ಮಾಡಿದರು. 10ನೇಯವರಾಗಿ ಗಂಭೀರವಾಗಿ ಗಾಯಗೊಂಡಿದ್ದ ಕ್ರೀಸ್‌ ವೋಕ್ಸ್‌ ಮೈದಾನಕ್ಕೆ ಇಳಿದಿದ್ದರು.

Prasidh Krishna Mohammed Siraj

ಗಸ್ ಅಟ್ಕಿನ್ಸನ್ ಅವರು ಕ್ರೀಸ್‌ ವೋಕ್ಸ್‌ಗೆ ಸ್ಟ್ರೈಕ್‌ ನೀಡುತ್ತಿರಲಿಲ್ಲ. ಸ್ಟ್ರೈಕ್‌ ನೀಡಿದ್ದರೆ 1 ಕೈಯಲ್ಲಿ ಬ್ಯಾಟ್‌ ಬೀಸಬೇಕಿತ್ತು. ಓವರ್‌ ಕೊನೆಯಲ್ಲಿ ಒಂದು ರನ್‌ ಓಡುವ ಮೂಲಕ ಮತ್ತೆ ಗಸ್ ಅಟ್ಕಿನ್ಸನ್ ಸ್ಟ್ರೈಕ್‌ಗೆ ಬರುತ್ತಿದ್ದರು. ಆದರೆ ಕೊನೆಗೆ ಸಿರಾಜ್‌ 17 ರನ್‌ ಹೊಡೆದಿದ್ದ ಗಸ್ ಅಟ್ಕಿನ್ಸನ್ ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ಸಿರಾಜ್‌ 5 ವಿಕೆಟ್‌ ಕಿತ್ತರೆ ಪ್ರಸಿದ್ಧ್‌ ಕೃಷ್ಣ 4 ವಿಕೆಟ್‌ ಪಡೆದರು. ಈ ಪಂದ್ಯದಲ್ಲಿ 10 ವಿಕೆಟ್‌ ಪಡೆದ ಸಿರಾಜ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹ್ಯಾರಿ ಬ್ರೂಕ್‌ ಅವರಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌
ಭಾರತ ಮೊದಲ ಇನ್ನಿಂಗ್ಸ್‌ 224/10
ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 247/10
ಭಾರತ ಎರಡನೇ ಇನ್ನಿಂಗ್ಸ್‌ 396/10
ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 367/10

error: Content is protected !!