ಲವ್‌ ಜಿಹಾದ್‌ ಆರೋಪ: ಯುವತಿಯ ಕತ್ತು ಸೀಳಿ ಹತ್ಯೆ

ಮಧ್ಯಪ್ರದೇಶ: ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗಿ, ಮದುವೆಯಾಗುವಂತೆ ಒತ್ತಡ ಹಾಕಿ, ಆಕೆ ನಿರಾಕರಿಸಿದಾಗ ಅವಳ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ಶೇಖ್ ರಯೀಸ್ ಪ್ರಕರಣದ ಆರೋಪಿಯಾಗಿದ್ದು, ಭಾಗ್ಯಶ್ರೀ ಕೊಲೆಗೀಡಾದ ನತದೃಷ್ಟೆ. ಈ ಘಟನೆ ಹಿಂದೂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನಾಕಾರರು ಇದನ್ನು ಲವ್ ಜಿಹಾದ್ ಎಂದು ಕರೆದಿದ್ದಾರೆ.


ಭಾಗ್ಯಶ್ರೀ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕತ್ತು ಸೀಳಿದ್ದಷ್ಟೇ ಅಲ್ಲದೆ, ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಭಾಗ್ಯಶ್ರೀ ಸಹೋದರಿ ಸುಭದ್ರಾ ಬಾಯಿ ರಯೀಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆತ ತುಂಬಾ ದಿನಗಳಿಂದ ತನ್ನ ಅಕ್ಕನ ಬಳಿ ಮದುವೆಯಾಗುವಂತೆ ಹಾಗೂ ಮತಾಂತರಗೊಳ್ಳುವಂತೆ ಆತ ಒತ್ತಡ ಹಾಕುತ್ತಿದ್ದ. ಆದರೆ ಆಕೆ ಒಪ್ಪಿಕೊಂಡಿರಲಿಲ್ಲ, ಹೀಗಾಗಿ ರಾತ್ರೋ ರಾತ್ರಿ ಆಕೆಯ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಆರೋಪಿಯ ವಿರುದ್ಧ ಕೊಲೆ ಮತ್ತು ದೌರ್ಜನ್ಯದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಆತನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಬುರ್ಹಾನ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಅಂತರ ಸಿಂಗ್ ಕನೇಶ್ ದೃಢಪಡಿಸಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

 

error: Content is protected !!