ಮಂಗಳೂರು: ಧರ್ಮಸ್ಥಳ ಗ್ರಾಮದ ಹೆಣ ಹೂತ ಪ್ರಕರಣದ ಶೋಧ ಕಾರ್ಯ ಇದೀಗ ನೇತ್ರಾವತಿ ನದಿಗೆ ಹೊಂದಿಕೊಂಡು ಹೆದ್ದಾರಿ ಪಕ್ಕದಲ್ಲೇ ಅನಾಮಧೇಯ ಮುಸುಕುದಾರಿ ವ್ಯಕ್ತಿ ಗುರುತಿಸಿರುವ ಪಾಯಿಂಟ್ ನಂಬರ್ 11, 12&13ರಲ್ಲಿ ಕಳೇಬರ ಪತ್ತೆ ಕಾರ್ಯ ಪ್ರಾರಂಭವಾಗಿದೆ.
ಈಗಾಗಲೇ 10 ಪಾಯಿಂಟ್ಗಳಲ್ಲಿ ಶೋಧ ಕಾರ್ಯ ಮುಗಿದಿದ್ದು, ನಿನ್ನೆ ಭಾನುವಾರ ಆಗಿದ್ದರಿಂದ ಬ್ರೇಕ್ ತೆಗೆದುಕೊಂಡಿದ್ದ ಎಸ್ಐಟಿ ತಂಡ, ಇವತ್ತು ಮತ್ತೆ ಮಹಜರು ಪ್ರಕ್ರಿಯೆ ಶುರು ಮಾಡಲಿದೆ. ಇನ್ನೂ 3 ಪಾಯಿಂಟ್ಗಳಲ್ಲಿ ಇವತ್ತು ಆಪರೇಷನ್ ನಡೆಸಲಿದ್ದು ಎಸ್ಐಟಿ ತಂಡ ಮುಂದೇನು ಮಾಡಲಿದೆ ಅನ್ನೋದು ಕುತೂಹಲ ಮೂಡಿಸಿದೆ.
ಬೆಳ್ತಂಗಡಿ SIT ಕಚೇರಿಯಿಂದ ಅಧಿಕಾರಿಗಳು ಹಾಗೂ ಮುಸುಕುದಾರಿ ಬಿಗಿ ಭದ್ರತೆಯ ಮೂಲಕ ನೇತ್ರಾವತಿ ಸ್ನಾನಘಟ್ಟಕ್ಕೆ ಆಗಮಿಸಿದ್ದಾರೆ. ಈ ಸ್ಪಾಟ್‌ಗಳು ರಸ್ತೆ ಸಮೀಪವಿರುವ ಕಾರಣ ಸಾರ್ವಜನಿಕರಿಗೆ ಕಾಣದ ರೀತಿ ಅದನ್ನು ಮರೆ ಮಾಡಿ ಉತ್ಪನನ ಕಾರ್ಯಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
13 ಪಾಯಿಂಟ್ಗಳೆಲ್ಲಾ ಮುಗಿದ ಮೇಲೆ ಎಸ್ಐಟಿ ಅಧಿಕಾರಿಗಳು, ದೂರುದಾರ ಗಂಭೀರವಾಗಿ ಆರೋಪ ಮಾಡಿದ್ದ ಕಲ್ಲೇರಿ ಗ್ರಾಮದ ನೆಲವನ್ನ ಅಗೆಯುತ್ತಾರಾ ಅನ್ನೋ ಕುತೂಹಲ ಶುರುವಾಗಿದೆ. ಬೆಳ್ತಂಗಡಿ ಪ್ರದೇಶದ ಕಲ್ಲೇರಿ ಗ್ರಾಮದಲ್ಲಿ ಶಾಲಾ ಬಾಲಕಿಯರ ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆ ಬಗ್ಗೆ ಇದೇ ಅನಾಮಿಕ ವ್ಯಕ್ತಿ ಪ್ರಸ್ತಾಪ ಮಾಡಿದ್ದ. ದೂರುದಾರ ಹೇಳಿದಂತೆ, 12 ರಿಂದ 15 ವರ್ಷಗಳ ಹದಿಹರೆಯದ ಹುಡುಗಿಯೊಬ್ಬಳು, ಸ್ಕೂಲ್ ಯೂನಿಫಾರ್ಮ್ ಧರಿಸಿದ್ದ ದೇಹ ನೋಡಿದ್ದೆ. ಆಕೆ ಅತ್ಯಾ*ಚಾರಕ್ಕೆ ಒಳಗಾಗಿದ್ದಳು ಅನ್ನೋ ಮಾಹಿತಿ ಕೊಟ್ಟಿದ್ದಾನೆ. SIT ತಂಡ ಮುಂದಿನ ನಡೆಯನ್ನ ಅತ್ತ ಇಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19