ಉಡುಪಿ: ತನ್ನ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ, ಎಂ.ಸಿ.ಸಿ. ಬ್ಯಾಂಕ್ ತನ್ನ 20ನೇ ಶಾಖೆಯನ್ನು ಬೈಂದೂರಿನ ಪೆಟ್ರೋಲ್ ಬಂಕ್ ಬಳಿಯ ಮುಖ್ಯ ರಸ್ತೆಯ ದೀಪಾ ಕಾಂಪ್ಲೆಕ್ಸ್’ನ ನೆಲ ಮಹಡಿಯಲ್ಲಿ ಆಗಸ್ಟ್ 3, 2025ರ ಭಾನುವಾರದಂದು ಉದ್ಘಾಟಿಸಿತು.
ಈ ಶಾಖೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಅವರು ಗಣ್ಯ ಅತಿಥಿಗಳು, ಸಮುದಾಯದ ಸದಸ್ಯರು ಮತ್ತು ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು. ಬೈಂದೂರಿನ ಹೋಲಿ ಕ್ರಾಸ್ ಚರ್ಚ್’ನ ಧರ್ಮಗುರುಗಳಾದ ರೆವರೆಂಡ್ ಫಾದರ್ ವಿನ್ಸೆಂಟ್ ಕುವೆಲ್ಲೊ ಅವರು ಆಶೀರ್ವದಿಸಿ, ಹೊಸ ಶಾಖೆಯ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಬು ಶೆಟ್ಟಿ ಸೇಫ್ ಡೆಪಾಸಿಟ್ ಲಾಕರ್ ಉದ್ಘಾಟಿಸಿದರು ಇ-ಸ್ಟ್ಯಾಂಪಿಂಗ್ ಸೌಲಭ್ಯವನ್ನು ಬೈಂದೂರಿನ ಸೈಂಟ್ ಥಾಮಸ್ ವಸತಿ ಶಾಲೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಫಿಲಿಪ್ ನೆಲಿವಿಲ್ಲಾ ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಶ್ರೀ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಕಾಪ್ಸಿನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಖಾರ್ವಿ, ಬೈಂದೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮೋಬಿ ಪಿ.ಸಿ. ಅವರು ಗೌರವಾನ್ವಿತ ಅತಿಥಿಗಳಾಗಿದ್ದರು.
ಬ್ಯಾಂಕಿನ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಉತ್ತೇಜಿಸಲು ಮತ್ತು ಅಮಂತ್ರಣ ಪತ್ರವನ್ನು ನೀಡಲು ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿಗೆ ನೀಡಿದ ಆತ್ಮೀಯ ಸ್ವಾಗತ, ಸಹಾಯ ಮತ್ತು ಸಹಕಾರಕ್ಕಾಗಿ ಸಂಸ್ಥೆಗಳು ಮತ್ತು ಪ್ರದೇಶದ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಉದ್ಘಾಟನೆಯಾದ ಒಂದು ವರ್ಷದೊಳಗೆ ಶಾಖೆಯು ರೂ.10 ಕೋಟಿ ವಹಿವಾಟು ಸಾಧಿಸಲು ಬೆಂಬಲವನ್ನು ಕೋರಿದರು. ಬೈಂದೂರು ಪ್ರದೇಶದಲ್ಲಿ ಬ್ಯಾಂಕಿನ ಬ್ರಾಂಡ್ ರಾಯಭಾರಿಗಳಾಗುವಂತೆ ಅವರು ಪ್ರೇರೆಪಿಸಿದರು.ಎಂ.ಸಿ.ಸಿ. ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕಿನ (RBI) ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಠೇವಣಿಗಳು DICGC ವಿಮೆಯಿಂದ ಸುರಕ್ಷಿತಗೊಳ್ಳುತ್ತವೆ. ಬ್ಯಾಂಕಿನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಕೇವಲ ಏಳು ವರ್ಷಗಳಲ್ಲಿ ತನ್ನ ವಹಿವಾಟನ್ನು ಯಶಸ್ವಿಯಾಗಿ ದ್ವಿಗುಣಗೊಳಿಸಿದೆ. ಎಂ.ಸಿ.ಸಿ. ಬ್ಯಾಂಕ್ ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಒದಗಿಸುವ ಎಲ್ಲಾ ಸೇವೆಗಳನ್ನು ನೀಡುತ್ತದೆ ಎಂದು ತಿಳಿಸಿದರು. ವಿವಿಧ ಅಡೆತಡೆಗಳು, ಕಷ್ಟಗಳು ಮತ್ತು ಸವಾಲುಗಳ ಹೊರತಾಗಿಯೂ, ಬ್ಯಾಂಕ್ ಸ್ಥಿರವಾದ ವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಸಮರ್ಥ ಆಡಳಿತ ಮಂಡಳಿ, ಸಿಬ್ಬಂದಿಯ ಸಮರ್ಪಿತ ಪ್ರಯತ್ನ ಮತ್ತು ಗ್ರಾಹಕರ ಬೆಂಬಲ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ರೆವರೆಂಡ್ ಫಾದರ್ ವಿನ್ಸೆಂಟ್ ಕುವೆಲ್ಲೋ, ಬೈಂದೂರಿನಲ್ಲಿ ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು ಮತ್ತು ಬ್ಯಾಂಕಿನ ಭವಿಷ್ಯದ ಪ್ರಯತ್ನಗಳಿಗೆ ದೇವರ ಆಶೀರ್ವಾದವನ್ನು ಕೋರಿದರು. ಪ್ರಗತಿಪರ ದೃಷ್ಟಿಕೋನ ಹೊಂದಿರುವ ಯುವ ಮತ್ತು ಕ್ರಿಯಾಶೀಲ ಅಧ್ಯಕ್ಷರನ್ನು ಹೊಂದಿರುವ ಎಂ.ಸಿ.ಸಿ. ಬ್ಯಾಂಕನ್ನು “ಸಮಾಜದ ಬ್ಯಾಂಕ್” ಎಂದು ಉಲ್ಲೇಖಿಸಿದರು. ಅತ್ಯುತ್ತಮ ಗ್ರಾಹಕ ಸೇವೆಯನ್ನು ನೀಡುವ ಮೂಲಕ ಎಂ.ಸಿ.ಸಿ. ಬ್ಯಾಂಕನ್ನು ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂದೂ ಅವರು ಬಣ್ಣಿಸಿದರು. ಹೆಚ್ಚುವರಿಯಾಗಿ, ಬ್ಯಾಂಕ್ ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಬಡವರು ಮತ್ತು ದೀನದಲಿತರಿಗೆ ವರದಾನವಾಗಲಿದೆ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೆವರೆಂಡ್ ಫಾದರ್ ಫಿಲಿಪ್ ನೆಲಿವಿಲ್ಲಾ ಅವರು ಎಂಸಿಸಿ ಬ್ಯಾಂಕಿನ ಅಸಾಧಾರಣ ಗ್ರಾಹಕ ಸೇವೆಯನ್ನು ಶ್ಲಾಘಿಸಿದರು ಮತ್ತು ಬ್ಯಾಂಕ್ ಕರ್ನಾಟಕದಾದ್ಯಂತ ವಿಸ್ತರಣೆಯಾಗುವುದನ್ನು ಹಾರೈಸಿದರು. ಬ್ಯಾಂಕಿನೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡು ಗ್ರಾಹಕರ ತೃಪ್ತಿಗೆ ಅದರ ಬದ್ಧತೆಯನ್ನು ಶ್ಲಾಘಿಸಿದರು.
ಬೈಂದೂರಿನಲ್ಲಿ ಶಾಖೆಯನ್ನು ಸ್ಥಾಪಿಸಿದ್ದಕ್ಕಾಗಿ ಶ್ರೀ ಬಾಬು ಶೆಟ್ಟಿ ಎಂಸಿಸಿ ಬ್ಯಾಂಕ್‌ಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸ್ಥಳೀಯ ನಿವಾಸಿಗಳು ಅದರ ಬೆಳವಣಿಗೆಗೆ ಬೆಂಬಲ ನೀಡುವಂತೆ ಪ್ರೋತ್ಸಾಹಿಸಿದರು. ಶ್ರೀ ರಾಜು ಪೂಜಾರಿ ಅವರು ತಮ್ಮ ಭಾಷಣದಲ್ಲಿ ಬ್ಯಾಂಕನ್ನು ಅಭಿನಂದಿಸಿ ಇನ್ನೂ ಹೆಚ್ಚಿನ ಸಾಧನೆಗಳತ್ತ ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡುವಂತೆ ಒತ್ತಾಯಿಸಿ, ನಿರಂತರ ಬೆಂಬಲದ ಭರವಸೆ ನೀಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಗಳಿಸಿದ ಬೈಂದೂರು ಪ್ರದೇಶದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೈಂದೂರು ಶಾಖೆಯಲ್ಲಿ ಖಾತೆಗಳನ್ನು ತೆರೆದ ಗ್ರಾಹಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಥಳೀಯ ಸಂಘಗಳ ಪದಾಧಿಕಾರಿಗಳ ಕೊಡುಗೆಯನ್ನು ಗುರುತಿಸಿ, ಅವರನ್ನು ಸನ್ಮಾನಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ಕು. ನಿಕೋಲ ರೋಶನಿ ಡಾಯಸ್ ಇವರನ್ನು ಸನ್ಮಾನಿಸಲಾಯಿತು. ಕಟ್ಟಡದ ಮ್ಹಾಲಿಕರಾದ ಶ್ರೀ ಜಗನ್ನಾಥ ಶೆಟ್ಟಿ ಮತ್ತು ಸಿವಿಲ್ ಎಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಅವರನ್ನು ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ನಿರ್ದೇಶಕರಾದ ಶ್ರೀ ಆಂಡ್ರ‍್ಯೂ ಡಿಸೋಜಾ, ಶ್ರೀ ಡೇವಿಡ್ ಡಿಸೋಜಾ, ಶ್ರೀ ಹೆರಾಲ್ಡ್ ಮೊಂತೇರೊ, ಶ್ರೀ ಮೆಲ್ವಿನ್ ವಾಸ್, ಶ್ರೀ ಜೆ.ಪಿ. ರೊಡ್ರಿಗಸ್, ಶ್ರೀ ರೋಶನ್ ಡಿಸೋಜಾ, ಡಾ| ಜೆರಾಲ್ಡ್ ಪಿಂಟೊ, ಶ್ರೀ ವಿನ್ಸೆಂಟ್ ಲಸ್ರಾದೊ, ಶ್ರೀ ಸಿ.ಜಿ. ಪಿಂಟೊ, ಶ್ರೀ ಸುಶಾಂತ್ ಸಲ್ಡಾನ್ಹಾ, ಶ್ರೀ ಅಲ್ವಿನ್ ಪಿ. ಮೊಂತೇರೊ, ಶ್ರೀ ಫೆಲಿಕ್ಸ್ ಡಿ’ಕ್ರೂಜ್ ಮತ್ತು ಜನರಲ್ ಮ್ಯಾನೇಜರ್ ಶ್ರೀ ಸುನಿಲ್ ಮೆನೆಜಸ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಶ್ರೀ ಎಲ್ರಾಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಬೈಂದೂರು ಶಾಖೆಯ ಹಿರಿಯ ವ್ಯವಸ್ಥಾಪಕರಾದ ಶ್ರೀ ಸಂದೀಪ್ ಕ್ವಾಡ್ರಸ್ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಶ್ರೀ ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19