ಒಂಬತ್ತು ವರ್ಷಗಳ ನಂತರ ತನ್ನ ತುಟಿಯ ಉಬ್ಬುಗಳನ್ನು ಕರಗಿಸಿ ಸುದ್ದಿಯಾಗಿದ್ದ ಉರ್ಫಿ ಜಾವೇದ್ ಇದೀಗ ತನ್ನ ತುಟಿ ಉಬ್ಬಿಸಿಕೊಂಡು ತೊಂಡೆಕಾಯಿ ಮಾಡಿ ಸುದ್ದಿಯಾಗಿದ್ದಾರೆ.
ಈಕೆ ಸುಂದರಿಯಾಗಿ ಕಾಣಲು ತನ್ನ ತುಟಿಗಳಿಗೆ ಏನೋ ಪ್ರಯೋಗ ಮಾಡಿ ಎಡವಟ್ಟು ಮಾಡಿಕೊಂಡಿದ್ದಾಳೆ ಎಂದು ನೆಟಿಜನ್ಸ್ ಮಾತಾಡಿಕೊಳ್ಳುತ್ತಿದ್ದಾಳೆ.
ತುಟಿಯಲ್ಲಾದ ಊತವನ್ನು ಪ್ರದರ್ಶಿಸಿ ಗಲೀಜಾಗಿ ಕಾಣುತ್ತಿದ್ದ ಉರ್ಫಿಯ ಮುಖವನ್ನು ಹಿಂದಿನ ನಸುಗೆಂಪು ಮುಖದೊಂದಿಗೆ ಹೊಂದಿಸಿ ಟ್ರೋಲರ್ಸ್ ಈಕೆಯನ್ನು ರೋಸ್ಟ್ ಮಾಡಿದ್ದಾರೆ.
ನೆಟ್ಟಿಗರು ಉರ್ಫಿಯ ಈ ಸುರ್ಪವನ್ನು ನೋಡಲಾಗದೆ ಈಕೆಯ ದೇಹಸಿರಿಯನ್ನು ಇನ್ಸ್ಟಾದಲ್ಲಿ ಅಪ್‌ಲೋಡ್ ಮಾಡುವ ಮೂಲಕ ನೋಡ್ರಪ್ಪ ನಮ್ಮ ಉರ್ಫಿ ಹಿಂದೆ ಹೀಗಿದ್ದಳು ಎಂದು ಶೀರ್ಷಿಕೆ ನೀಡುತ್ತಿದ್ದಾರೆ.
ಟ್ರೋಲರ್ಸ್‌ಗಳಿಂದ ರೋಸ್ಟ್ ಆಗುತ್ತಿರುವ ಉರ್ಫಿ ಇದೀಗ ವಿಡಿಯೋವೊಂದನ್ನು ಹಂಚಿಕೊಂಡು ತಾನು ಲಿಪ್ ಫಿಲ್ಲರ್ ಕರಗಿಸುತ್ತಿದೇನೆ ಎಂದು ಬಹಿರಂಗಪಡಿಸಿದ್ದಾರೆ.
ಈ ವೀಡಿಯೊದಲ್ಲಿ, ವೈದ್ಯರು ಅವಳ ತುಟಿಗಳಿಗೆ ಇಂಜೆಕ್ಟ್ ಮಾಡುತ್ತಿರುವುದು ಕಂಡುಬಂದಿದೆ, ಇದರ ಪರಿಣಾಮವಾಗಿ ಅವಳ ಮುಖವು ನಿಮಿಷದಿಂದ ನಿಮಿಷಕ್ಕೆ ಹೆಚ್ಚು ಊದಿಕೊಳ್ಳುತ್ತಿತ್ತು.
ಲಿಪ್ ಫಿಲ್ಲರ್ ಅನ್ನು ಕರಗಿಸುವುದು ಎಂದರೆ ಹೈಲುರಾನಿಕ್ ಆಮ್ಲ ಮೂಲಕ ತುಟಿಯನ್ನು ಇನ್ನಷ್ಟು ಸುಂದರವಾಗಿ ಕಾಣಿಸುವಂತೆ ಮಾಡುವ ಒಂದು ಚಿಕಿತ್ಸಾ ವಿಧಾನವಾಗಿದೆ. ಇದಕ್ಕೆ ಸಾಮಾನ್ಯವಾಗಿ ಹೈಲುರೊನಿಡೇಸ್ ಎಂಬ ಕಿಣ್ವವನ್ನು ಬಳಸಲಾಗುತ್ತದೆ.
ಈ ಕಿಣ್ವವು ಫಿಲ್ಲರ್‌ನಲ್ಲಿರುವ ಹೈಲುರಾನಿಕ್ ಆಮ್ಲವನ್ನು ಒಡೆಯುತ್ತದೆ, ತುಟಿಗಳು ಅವುಗಳ ನೈಸರ್ಗಿಕ ಆಕಾರಕ್ಕೆ ಮರಳಲು ಮೊದಲು ತುಟಿಗಳು ತೊಂಡೆಕಾಯಿ ತರ ವಿಕಾರವಾಗಿ ಕಾಣುತ್ತದೆ. ಅಂತಿಮವಾಗಿ ಅದು ಕರಗಿ ಸುಂದರವಾಗಿ ಕಾಣುತ್ತದೆ.
ಆದರೆ ಕೆಲವೊಮ್ಮೆ ತುಟಿಗಳ ಸೌಂದರ್ಯವೇ ಹಾಳಾಗುವುದಿದೆ. ಇಲ್ಲಿ ಏನಾದರೂ ಎಡವಟ್ಟು ಆದರೆ ಹಿಂದಿನ ಉರ್ಫಿಯನ್ನು ನಾವು ವಿಡಿಯೋಗಳಷ್ಟೇ ನೋಡಬೇಕು.