ಗುರುಪುರ: ಗುರುಪುರ ನದಿಗೆ ಹಾರಿ ಬಸ್ ಕಂಡಕ್ಟರ್ ಓರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಲಾಂ ಎಂಬವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಸೆಲಿನಾ ಬಸ್ ಕಂಡಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದ ಸಲಾಂ ಅವರ ಬೈಕ್, ಮೊಬೈಲ್, ವಾಚ್ ಅನಾಥವಾಗಿ ಗುರುಪುರ ನದಿ ಬಳಿ ಪತ್ತೆಯಾಗಿತ್ತು. ಇದರ ಆಧಾರದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜುಗಾರರ ತಂಡ ಗುರುಪುರದ ಫಲ್ಗುಣಿ ನದಿಯಲ್ಲಿ ಶೋಧಿಸಿ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದರು. ಬಜ್ಪೆ ಪೊಲೀರು ಸ್ಥಳಕ್ಕಾಗಮಿಸಿದ್ದರು.