ಉಪ್ಪಿನಂಗಡಿ: ಅತ್ತ ಗಂಡ ನಾಗರ ಪಂಚಮಿ ಹಬ್ಬಕ್ಕೆ ಹೋಗುತ್ತಿದ್ದಂತೆ ಇತ್ತ ಆತನ ಹೆಂಡತಿ ನಿಗೂಢವಾಗಿ ನಾಪತ್ತೆಯಾದ ಘಟನೆ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಬೆಳಕಿಗೆ ವಣದುದೆ. ಇಲ್ಲಿನ ಬಾಡಿಗೆ ಮನೆಯಲ್ಲಿ ಹಾನಗಲ್ ತಾಲೂಕಿನ ಸಂಕ್ರಿಕೊಪ್ಪ ನಿವಾಸಿ ಭೀಮಪ್ಪನ ಪತ್ನಿ ರೇಷ್ಮಾ ಮಲಲಿ ಭಜಂತ್ರಿ (26) ನಿಗೂಢವಾಗಿ ನಾಪತ್ತೆಯಾದ ಹೆಂಗಸು.
ಭೀಮಪ್ಪ ನಾಗರ ಪಂಚಮಿಯ ಹಬ್ಬಕ್ಕಾಗಿ ಜು.26 ರಂದು ತನ್ನ ಹೆಂಡತಿಯನ್ನು ಉಪ್ಪಿನಂಗಡಿಯ ಬಾಡಿಗೆ ಮನೆಯಲ್ಲಿಯೇ ಬಿಟ್ಟು ಹಾವೇರಿಗೆ ಹೋಗಿದ್ದರು. ಆದರೆ ಜು.30 ರಂದು ಹಿಂತಿರುಗಿ ತನ್ನ ಬಾಡಿಗೆ ಮನೆಗೆ ಬಂದಾಗ ಹೆಂಡತಿ ರೇಷ್ಮಾ ನಾಪತ್ತೆಯಾಗಿದ್ದರು. ಈಕೆಗಾಗಿ ಭೀಮಪ್ಪ ಎಲ್ಲೆಂದರಲ್ಲಿ ಸಾಕಷ್ಟು ಹುಡುಕಾಡಿ ಕೊನೆಗೆ ಹೆಂಡತಿ ಪತ್ತೆಯಾಗದೇ ಇದ್ದಾಗ ಬಸವಳಿದು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಿಖೆ ನಡೆಸುತ್ತಿದ್ದಾರೆ.