ನಾಗ್ಪುರ: ಶ್ರೀಮಂತ ಪುರುಷರನ್ನೇ ಗುರಿಯಾಗಿಸಿಕೊಂಡು ಬರೋಬ್ಬರಿ 8 ಮದುವೆಯಾಗಿದ್ದೂ ಅಲ್ಲದೆ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದ ಖತರ್ನಾಕ್ ಲೇಡಿಯನ್ನು 9ನೇ ಮದುವೆ ಯತ್ನದಲ್ಲಿದ್ದಾಗ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಮೀರಾ ಫಾತಿಮಾ ಅವರನ್ನು ಮದುವೆಯಾದ ಬಳಿಕ ತನ್ನ ಗಂಡಂದಿರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಳು ಎನ್ನಲಾಗಿದೆ. ಸದ್ಯ ಸಮೀರಾ ಫಾತಿಮಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಸಮೀರಾ ಫಾತಿಮಾ ತನ್ನ ಬೇರೆ ಬೇರೆ ಗಂಡಂದಿರಿಂದ ಹಣ ಸುಲಿಗೆ ಮಾಡಲು ಒಂದು ಗ್ಯಾಂಗ್ ಜೊತೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಸಮೀರಾ ವಿದ್ಯಾವಂತಳಾಗಿದ್ದು, ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾಳೆ.
ಕಳೆದ 15 ವರ್ಷಗಳಿಂದ ಆಕೆ ಹಲವಾರು ಪುರುಷರನ್ನು ವಂಚಿಸಿದ್ದಾಳೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವಿಶೇಷವಾಗಿ ಮುಸ್ಲಿಂ ಸಮುದಾಯದ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ಈ ವಂಚನೆ ಮಾಡಲಾಗಿದೆ. ಆಕೆಯ ಗಂಡನೊಬ್ಬ ಸಂತ್ರಸ್ತೆಯೊಬ್ಬಳಿಂದ 50 ಲಕ್ಷ ರೂಪಾಯಿ ಮತ್ತು ಇನ್ನೊಬ್ಬರಿಂದ 15 ಲಕ್ಷ ರೂಪಾಯಿಗಳನ್ನು ನಗದು ಮತ್ತು ಬ್ಯಾಂಕ್ ವರ್ಗಾವಣೆಯ ಮೂಲಕ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ.