ಮಂಗಳೂರು: ಧರ್ಮಸ್ಥಳದ ದಟ್ಟ ಅರಣ್ಯಗಳಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನಲಾಗ್ತಿರುವ ಧರ್ಮಸ್ಥಳ ಕೇಸ್ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಧರ್ಮಸ್ಥಳ ಕೇಸ್ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಸ್ಥಳ ಮಹಜರು ವೇಳೆ ಸಾಕ್ಷ್ಯ ದೂರುದಾರ ತೋರಿಸಿದ ಜಾಗಗಳಲ್ಲಿ ಉತ್ಖನನ ಕಾರ್ಯ ಶುರುವಾಗಿದೆ. ಉತ್ಖನನದ ಐದನೇ ದಿನವಾದ ಇಂದು ಪಾಯಿಂಟ್ ನಂಬರ್ 9, 10, 11ರಲ್ಲಿ ಉತ್ಖನನ ನಡೆಯಲಿದೆ. ಮುಸುಕುದಾರಿ ಸೂಚಿಸಿರುವ ಪಾಯಿಂಟ್ ನಂಬರ್ 9ರ ರಹಸ್ಯ ಇಂದು ಬಯಲಾಗುತ್ತಾ?
ಧರ್ಮಸ್ಥಳದ ನೇತ್ರಾವತಿ ತಟದಲ್ಲಿರೋ ದಟ್ಟ ಅರಣ್ಯ ಪ್ರದೇಶದಲ್ಲಿ ಉತ್ಖನನ ಕಾರ್ಯ ಶುರುವಾಗಿ 5 ದಿನಗಳಾಗಿದ್ದು ಮೊದಲ 2 ದಿನ ಯಾವುದೇ ಕುರುಹು ಸಿಗದೇ ಎಸ್ಐಟಿ ತಂಡ ಬರಿಗೈಯಲ್ಲಿ ವಾಪಸ್ ಆಗಿತ್ತು. ಆದರೆ ಮೂರನೇ ದಿನ, ಪಾಯಿಂಟ್ ನಂಬರ್ 6ರಲ್ಲಿ ಅಸ್ಥಿಪಂಜರದ ಮೂಳೆಗಳ ಸಹಿತ ಹಲವು ವಸ್ತುಗಳು ಸಿಕ್ಕಿದೆ ಎಂದು ವರದಿ ಆಗಿದೆ. ಆದರೆ 4ನೇ ದಿನದ ಉತ್ಖನನ ಕಾರ್ಯದಲ್ಲಿ ತನಿಖಾಧಿಕಾರಿಗಳಿಗೆ ಯಾವುದೇ ಕಳೇಬರ ಸಿಕ್ಕಿಲ್ಲ ಎಂದು ವರದಿ ಆಗಿದೆ. ಇಂದು ಐದನೇ ದಿನದ ಉತ್ಖನನ ಕಾರ್ಯ ನಡೆಯದ್ದು ಎಲ್ಲರ ಎಲ್ಲರ ಗಮನ ಪಾಯಿಂಟ್ ನಂಬರ್ 9ರ ಮೇಲಿದೆ.
ಇಂದು ಪಾಯಿಂಟ್ ನಂಬರ್ 9,10,11 ಮೂರು ಜಾಗಗಳಲ್ಲೂ ಉತ್ಖನನ ಕಾರ್ಯ ನಡೆಯಲಿದೆ. ಮೊದಲೆರೆಡು ದಿನ ತಾನು ಹೇಳಿದ ಜಾಗದಲ್ಲಿ ಸಾಕ್ಷ್ಯಗಳು ಸಿಗದಿದ್ದ ವೇಳೆ ಮುಸುಕುದಾರಿ ಪಾಯಿಂಟ್ ನಂಬರ್ 9ರ ಜಾಗವನ್ನು ಅಗೆಯುವಂತೆ ಮನವಿ ಮಾಡಿ, ಅಲ್ಲಿ ಕಳೇಬರ ಸಿಕ್ಕೇ ಸಿಗುತ್ತೆ ಎಂದು ಹೇಳಿದ್ದ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಎಸ್ಐಟಿ ಮುಖ್ಯಸ್ಥರ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯಬೇಕು ಎಂದು ಪಟ್ಟು ಕೂಡ ಹಿಡಿದಿದ್ದ ಎನ್ನಲಾಗ್ತಿದೆ. ಹಾಗಾಗಿ ಪಾಯಿಂಟ್ ನಂಬರ್ 9ರಲ್ಲಿ ಕಳೇಬರದ ಕುರುಹು ಸಿಗಬಹುದಾ? ಎಂಬ ಕುತೂಹಲವನ್ನು ಜನರಲ್ಲಿ ಸೃಷ್ಟಿ ಮಾಡಿದೆ.
ಇದೀಗ ಅನಾಮಿಕ ತೋರಿಸಿದ ಈ ಜಾಗದಲ್ಲಿ ಇಂದು ಉತ್ಖನನ ನಡೆಯುತ್ತಿದ್ದು, ಮಹಾರಹಸ್ಯ ಬಯಲಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19