ಮಂಗಳೂರು: ಧರ್ಮಸ್ಥಳ ಕೇಸ್ ನ ದೂರುದಾರ ಭೀಮನಿಗೆ ಬೆದರಿಕೆ ಹಾಕಲಾಗಿದೆ. ಅದೂ ಕೂಡ SIT ಟೀಂನಲ್ಲಿರೋ ಇನ್ ಸ್ಪೆಕ್ಟರ್ ಮಂಜುನಾಥ್ ಗೌಡ ಬೆದರಿಕೆ ಒಡ್ಡಿದ್ದಾರಂತೆ, “ನೀನು ಧರ್ಮಸ್ಥಳ ವಿರುದ್ಧ ಕೊಟ್ಟಿರೋ ದೂರು ವಾಪಸ್ ಪಡೀಬೇಕು ಇಲ್ಲಾಂದ್ರೆ ಜೈಲೂಟ ಹಾಕಿಸ್ತೀನಿ” ಅಂತ ಮಂಜುನಾಥ್ ಗೌಡ ಹೇಳಿ ಬಳಿಕ ಪ್ರತ್ಯೇಕ ಹೇಳಿಕೆಯನ್ನು ವಿಡಿಯೋ ಮಾಡಿದ್ದಾಗಿ ಭೀಮನ ಪರ ವಕೀಲೆ ಅನನ್ಯಾ ಗೌಡ ದೂರು ನೀಡಿದ್ದಾರೆ.
ಮಂಜುನಾಥ ಗೌಡ ಶಿರಸಿ ಠಾಣೆಯ ಠಾಣಾಧಿಕಾರಿಯಾಗಿದ್ದು ನಿನ್ನೆ ರಾತ್ರಿ ಬೆಳ್ತಂಗಡಿಯ ಎಸ್ ಐಟಿ ಕ್ಯಾಂಪ್ ನಲ್ಲಿ ಭೀಮನಿಗೆ ಬೆದರಿಕೆ ಹಾಕಿದ್ದಾಗಿ ದೂರಲಾಗಿದೆ.
ಮೂಲ ದೂರನ್ನ ಹಿಂಪಡೆಯದಿದ್ರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಬೆದರಿಕೆ ಒಡ್ದಿದ್ದು ಇದರಿಂದ ಹೆದರಿದ ಭೀಮಾ ತನ್ನ ವಕೀಲರಿಗೆ ತಿಳಿಸಿದ್ದಾನೆ.
ಅಷ್ಟೇ ಅಲ್ಲ ಇಮೇಲ್ ನ ಮೂಲಕ ಎಸ್ಐಟಿ ಮುಖ್ಯಸ್ಥರಿಗೆ, ಚೀಫ್ ಸೆಕ್ರೆಟರಿಗೆ,ಗೃಹ ಇಲಾಖೆಗೆ ದೂರು ನೀಡಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19