ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಗ್ನಿ ದುರಂತ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ BBMP ಅಧಿಕಾರಿಗಳು ಅಲರ್ಟ್ ಆಗಿ ನಗರದಲ್ಲಿರುವ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 200ಕ್ಕೂ ಅಧಿಕ ಬಾರ್, ಪಬ್ ಹಾಗೂ ಹೋಟೆಲ್‌ಗಳಿಗೆ BBMP ನೋಟಿಸ್ ಜಾರಿ ಮಾಡಿದೆ. ಒಂದು ವಾರದೊಳಗೆ ಸ್ಮೋಕಿಂಗ್ ಝೋನ್ ನಿರ್ಮಿಸದಿದ್ರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿರುವ 200ಕ್ಕೂ ಅಧಿಕ ಬಾರ್, ಪಬ್ ಹಾಗೂ ಹೊಟೇಲ್‌ಗಳಿಗೆ ಸ್ಮೋಕಿಂಗ್ ಝೋನ್ ಇಲ್ಲ ಎಂಬ ಕಾರಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ ಎಲ್ಲಾ ಹೋಟೆಲ್‌ಗಳಲ್ಲಿ 20ಕ್ಕಿಂತ ಹೆಚ್ಚು ಆಸನಗಳಿರುವ ಸ್ಮೋಕಿಂಗ್ ಝೋನ್‌ನ್ನು ನಿರ್ಮಿಸಬೇಕು ಎಂದಿದ್ದಾರೆ.
ವಲಯ ಆರೋಗ್ಯಾಧಿಕಾರಿಗಳಿಗೆ ಏಳು ದಿನ ಸಮಯ ನೀಡಲಾಗಿದೆ, ಈ ಏಳು ದಿನದಲ್ಲಿ ತಮ್ಮ ವಲಯ ವ್ಯಾಪ್ತಿಯಲ್ಲಿ ಎಷ್ಟು ಪಬ್, ಬಾರ್ ಮತ್ತು ಸ್ಟೋರೆಂಟ್‌ಗಳಿವೆ, ಎಷ್ಟು ಪಬ್, ಬಾರ್ ಮತ್ತು ಸೋರೆಂಟ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿ ನ್ಯೂನ್ಯತೆಗಳಿವೆ. ಪಬ್, ಬಾರ್ ಮತ್ತು ರೆಸ್ಟೋರೆಂಟ್ ನಡೆಸುವುದಕ್ಕೆ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಗಿ ಪಡೆಯಲಾಗಿದೆಯೇ? ಎಷ್ಟು ಕಡೆ ಅನಧಿಕೃತವಾಗಿ ಮತ್ತು ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿದೆ ಎಂದು ಪರಿಶೀಲಿಸಲು ಸೂಚಿಸಲಾಗಿದೆ.
ಬಿಬಿಎಂಪಿಯ ಆರೋಗ್ಯಾಧಿಕಾರಿಗಳು 12 ಪಬ್, ಬಾರ್‌ಗಳನ್ನು ಮುಚ್ಚಿಸಿದ್ದಾರೆ. ಇನ್ನು 86ಕ್ಕೆ ನೋಟಿಸ್ ನೀಡಿದ್ದಾರೆ. ನೋಟಿಸ್ ಬಂದ ಒಂದು ವಾರದೊಳಗೆ ಸ್ಮೋಕಿಂಗ್ ಝೋನ್ ನಿರ್ಮಾಣ ಮಾಡದಿದ್ದರೆ ಹೊಟೇಲ್‌ಗಳ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ತಿಳಿಸಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19