ಪಾಯಿಂಟ್‌ ನಂಬರ್‌ 7ರಲ್ಲಿ ಏನೂ ಇಲ್ಲ, 8ರಲ್ಲಿ ಹುಡುಕಾಟ ಆರಂಭ

ಮಂಗಳೂರು: ಧರ್ಮಸ್ಥಳದ ಕಾಡಿನಲ್ಲಿ ಅನಾಮಧೇಯ ಹೇಳಿದ ಜಾಗವನ್ನು ಪಾಯಿಂಟ್‌ ಮಾಡಲಾಗಿದ್ದು, ಇಂದು ಪಾಯಿಂಟ್‌ ನಂಬರ್‌ 7 ಅನ್ನು ಎಸ್‌ಐಟಿ ಅಧಿಕಾರಿಗಳು ಅಗೆಸಲಾಗಿದೆ. ಆದರೆ ಅಸ್ಥಿಪಂಜರದ ಕುರುಹುಗಳಾಗಲೀ, ಇನ್ಯಾವುದೇ ವಸ್ತುಗಳಾಗಲೀ ಪತ್ತೆಯಾಗಿಲ್ಲ ಎಂದು ಎಸ್‌ಐಟಿ ಮೂಲಗಳಿಂದ ಮಾಹಿತಿ ಲಭಿಸಿದೆ.

ಪಾಯಿಂಟ್‌ ನಂಬರ್‌ 7ರಲ್ಲಿ ಅಸಸ್ಥಿಪಂಜರದ ಕುರುಹುಗಳು ಸಿಗಬಹುದು ಎಂದು ನಿಗೂಢ ವ್ಯಕ್ತಿ ಹೇಳಿದ್ದ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಗುಂಡಿ ಅಗೆದು ಶೋಧಿಸಲಾಯಿತು.   ಮೂಲಗಳ ಪ್ರಕಾರ ಇಲ್ಲಿ ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ. ಹೀಗಾಗಿ ಪಾಯಿಂಟ್‌ ನಂಬರ್‌ 8 ಅನ್ನು ಅಗೆಯಲು ಆರಂಭಿಸಲಾಗಿದೆ. ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಘಟ್ಟದತ್ತ ಸಾಗುತ್ತಿದ್ದು, ಅಂತಿಮವಾಗಿ ಎಲ್ಲಿಗೆ ತಲುಪಲಿದೆ ಎನ್ನುವ ಕುತೂಹಲ ಗರಿದೆದರಿದೆ.

ಪಾಯಿಂಟ್‌ ನಂಬರ್‌ 6ರಲ್ಲಿ

  • 5 ಹಲ್ಲುಗಳು
  • ದವಡೆಯ  ಮೂಳೆ
  • ಎರಡು ತೊಡೆ ಭಾಗದ ಮೂಳೆಗಳು
  • ಬುರುಡೆಯ ಎರಡು ತುಂಡುಗಳು
  • ಹಾಗೂ ಇನ್ನಿತರ ಎಲುಬುಗಳು  ಪತ್ತೆಯಾಗಿದ್ದವು.
error: Content is protected !!