ಮಂಗಳೂರು: ಮುಡಿಪುವಿನ ಪ್ರಜ್ಞಾ ಸ್ವಾಧಾರ ಕೇಂದ್ರದ ಜು.೩೦ರಂದು ಸಂಜೆ ಕಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದ ಓಡಿಸ್ಸಾ ರಾಜ್ಯದ ತ್ರಿಶಾ (22) ಎಂಬಾಕೆ ನಿಗೂಢವಾಗಿ ನಾಪತ್ತೆಯಾಗಿದ್ದಾಗಿ ಸ್ವಾಧರ ಕೇಂದ್ರದ ಅಧೀಕ್ಷ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತ್ರಿಶಾ ಕಂಕನಾಡಿ ಪೊಲೀಸರು ಠಾಣಾ ಸರಹದ್ದಿನಲ್ಲಿ ಸುತ್ತಾಡುತ್ತಿದ್ದು, ಈಕೆಯನ್ನು ಜು.18ರಂದು ಮುಡಿಪುವಿನಲ್ಲಿರುವ ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿ ದಾಖಲು ಮಾಡಲಾಗಿತ್ತು. ಜು.30ರಂದು ಈಕೆ ಕಂಪೌಂಡ್ ಗೋಡೆ ಹಾರಿ ನಿಗೂಢ ನಾಪತ್ತೆಯಾಗಿದ್ದಳು. ಕಾಣೆಯಾದ ತ್ರಿಶಾಳನ್ನು ಪತ್ತೆ ಹಚ್ಚುವಂತೆ ಕೊಣಾಜೆ ಪೊಲೀಸ್ ಠಾಣಾ ಮೊ.ನಂ: 89/2025 ಕಲಂ ಅಂತೆ ಮಹಿಳೆ ಕಾಣೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಚಹರೆ
ಹೆಸರು- ತ್ರಿಶಾ
ಪ್ರಾಯ- 22 ವರ್ಷ
ತಂದೆ- ಆಕಾಶ್
ತಾಯಿ- ಮನನಿ
ವಿಳಾಸ- ಉತ್ಕಲ ಗ್ರಾಮ, ಕೊಲಹಂದಿ, ಒಡಿಸ್ಸಾ ರಾಜ್ಯ
ಎತ್ತರ- ಸುಮಾರು 4 ಅಡಿ
ಮೈ ಬಣ್ಣ – ಕಪ್ಪು ಮೈ ಬಣ್ಣ
ಮೈಕಟ್ಟು – ಧೃಡ ಶರೀರ
ಕೂದಲು- ಕಪ್ಪು ಕೂದಲು
ವಿದ್ಯಾಬ್ಯಾಸ – 5ನೇ ತರಗತಿ
ತಿಳಿದಿರುವ ಬಾಷೆ- ಹಿಂದಿ, ಒಡಿಸ್ಸಾ
ಧರಿಸಿದ್ದ ಬಟ್ಟೆ- ಬಿಳಿ ಕಲರಿನ ಚೂಡಿದಾರ ಟಾಪ್ ಹಾಗೂ ನೀಲಿ ಬಣ್ಣದ ಲೆಗಿನ್ಸ್ ಪ್ಯಾಂಟ್
ತ್ರಿಶಾ ಪತ್ತೆಯಾದಲ್ಲಿ ಪೊಲೀಸ್ ನಿರೀಕ್ಷಕರು, ಕೊಣಾಜೆ ಪೊಲೀಸ್ ಠಾಣೆ. ಮಂಗಳೂರು ನಗರ ಮೊ.ನಂ. 9480802315, 9019873901 ಅಥವಾ ದೂರವಾಣಿ ಸಂಖ್ಯೆ: 0824-2220536, e-mail address:- konajemgc@ksp.gov.in ಗೆ ಸಂಪರ್ಕಿಸಲು ಕೋರಲಾಗಿದೆ.