ತಲೆಮರೆಸಿಕೊಂಡಿದ್ದ ವರದಕ್ಷಿಣೆ, ವೇಶ್ಯಾವಾಟಿಕೆ ಪ್ರಕರಣದ ಆರೋಪಿಗಳು ಸೆರೆ

ಮಂಗಳೂರು: ಮಹಿಳಾ ಪೊಲಿಸ್ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣದಲ್ಲಿ ದೀರ್ಘಾವಧಿಯಲ್ಲಿ ತಲೆಮರೆಸಿಕೊಂಡು ಬಾಕಿ ಇದ್ದ ಪ್ರಕರಣ (ಎಲ್.ಪಿ.ಸಿ) ಆರೋಪಿಗಳನ್ನು ಬಂಧಿಸಲಾಗಿದೆ. ವೇಶ್ಯಾವಾಟಿಕೆ ಪ್ರಕರಣದ ಆರೋಪಿ ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ ಪಿ. ದಾಮೋದರ್ ಹಾಗೂ ವರದಕ್ಷಿಣೆ ಪ್ರಕರಣದ ಆರೋಪಿ ಕಂಕನಾಡಿ ನಿವಾಸಿ ಉಬೇದುಲ್ಲಾ ಬಂಧಿತ ಆರೋಪಿಗಳು.
2011 ನೇ ಸಾಲಿನಲ್ಲಿ ದಾಖಲಾದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 4 ನೇ ಆರೋಪಿ ಪಿ. ದಾದಾಮೋದರನ ವಿರುದ್ಧ ನ್ಯಾಯಾಲಯವು ಎಲ್.ಪಿ.ಸಿ ವಾರಂಟು ಹೊರಡಿಸಿದ್ದು, ಸುಮಾರು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಅದೇ ರೀತಿ 2018 ನೇ ಸಾಲಿನಲ್ಲಿ ದಾಖಲಾದ ಪ್ರಕರಣದಲ್ಲಿ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಉಬೇದುಲ್ಲಾ ಎಂಬಾತನನ್ನು ಕಣ್ಣೂರು ಅಂತರ್‌ ರಾಷಟ್ರೀಯ ಏರ್‌ ಪೋರ್ಟಿನಲ್ಲಿ ಬಂಧಿಸಲಾಗಿದೆ.

ಧನ್ಯವಾದ ಲಾಡ್ಜ್‌ನಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಪಿ.ದಾಮೋದರ್

ದಿನಾಂಕ 14-03-2011 ರಂದು ಮಂಗಳೂರು ನಗರದ ಹಂಪನ ಕಟ್ಟೆಯಲ್ಲಿರುವ ಧನ್ಯವಾದ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸಿಕೊಂಡಿರುವ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ 04/2011 ಕಲಂ 3(2)(ಎ) 5(ಡಿ),2 , 7 ಐ.ಟಿ.ಪಿ ಕಾಯ್ದೆ ರೀತಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ತನಿಖಾಧಿಕಾರಿಯವರು ತನಿಖೆಯನ್ನು ನಡೆಸಿ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದೋಷರೋಪಣಾ ಪತ್ರವನ್ನು ಮಾನ್ಯ ನ್ಯಾಯಾಲಯ ಸಲ್ಲಿಸಿದ್ದು, ಪ್ರಕರಣವು ವಿಚಾರಣೆಯಾಗಿ ಪ್ರಕರಣದ 1 ರಿಂದ 3 ನೇ ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದರು.

ಆದರೆ ಪ್ರಕರಣ 4 ನೇ ಆರೋಪಿ ಪಿ.ದಾಮೋದರ್ ಎಂಬಾತನು ತಲೆಮರೆಸಿಕೊಂಡಿರುವುದರಿಂದ ನ್ಯಾಯಾಲಯವು ಈತನ ವಿರುದ್ದ ಎಲ್.ಪಿ.ಸಿ ವಾರಂಟು ಹೊರಡಿಸಿತ್ತು. ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಭಾಲಕೃಷ್ಣ, ಪಿ.ಐ ಮತ್ತು ಸಿಬ್ಬಂದಿ ಸುಮಾರು 14 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಮಂಗಳೂರಿನ ಹೊಯಿಗೆಬಜಾರ್‌ ನಿವಾಸಿ ಪಿ.ದಾಮೋದರನನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

ವರದಕ್ಷಿಣೆ ಪ್ರಕರಣದ ಉಬೇದುಲ್ಲಾ:

2018 ನೇ ಸಾಲಿನಲ್ಲಿ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಾಖಲಾದ ವರದಕ್ಷಿಣಿ ಕಿರುಕುಳ ಪ್ರಕರಣದಲ್ಲಿ ಆರೋಪಿ ಲಿಟಲ್ ಫ್ಲವರ್ ಅಪಾರ್ಟ್ಮೆಂಟ್ ಕಂಕನಾಡಿ ನಿವಾಸಿ ಉಬೇದುಲ್ಲಾ ಎಂಬಾತನು ತನ್ನ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕಿರುಕುಳ ನೀಡಿದ್ದ. ಅಲ್ಲದೆ ಮದುವೆಯ ಸಮಯಲ್ಲಿ ನೀಡಿದ ಚಿನ್ನಭಾರಣಗಳನ್ನು ತೆಗೆದುಕೊಂಡು ಹೋಗಿ ಮಾರಿ ಅಲ್ಲಿಂದ ವಿದೇಶಕ್ಕೆ ತೆರಳಿ ಮಡದಿಗೆ ಫೋನ್ ಕರೆ ಮಾಡುತ್ತಿರಲಿಲ್ಲ ಅಲ್ಲದೆ ಹೆಂಡತಿಯ ಫೋನ್ ಕರೆಗೂ ಸ್ಪಂದಿಸದೆ, ಕೆಲವೊಮ್ಮೆ ಕರೆ ಸ್ವೀಕರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ಮಾಡಿದ್ದ. ಈ ಬಗ್ಗೆ ದಿನಾಂಕ 03-11-2018 ರಂದು ಮಹಿಳಾ ಪೊಲೀಸ್ ಠಾಣೆ ಅ.ಕ್ರ 54/2018 ಕಲಂ 498(ಎ) , 504 ರೀತಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು, ಈ ತಲೆಮರೆಸಿಕೊಂಡಿದ್ದ ಕಾರಣ ಎಲ್.ಪಿ.ಸಿ ವಾರಂಟ್ ಹೊರಡಿಸಲಾಗಿತ್ತು. ಆರೋಪಿ‌ ಸುಮಾರು 7 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದನು. ಈತನನ್ನು ಜುಲೈ 29 ಕೇರಳ ರಾಜ್ಯದ ಕಣ್ಣೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬರುತ್ತಿದ್ದಂತೆ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರ ಪ್ರಕಟಣೆ ತಿಳಿಸಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!