ಆಳ್ವಾಸ್‌ ಪ್ರಗತಿ: ಪತ್ರಿಕೋದ್ಯಮ ಆಸಕ್ತರಿಗೆ ಭಾರೀ ಉದ್ಯೋಗವಕಾಶ

ಮಂಗಳೂರು: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳದ 15ನೇ ಆವೃತ್ತಿ ಇದೇ ಆ.1 ಮತ್ತು 2ರಂದು ಮೂಡಬಿದ್ರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಪತ್ರಿಕೋದ್ಯಮ ಆಸಕ್ತರಿಗೆ ಭಾರೀ ಉದ್ಯೋಗವಕಾಶಗಳು ಲಭ್ಯವಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮುಖ್ಯ ವಾಗಿ 13ಕ್ಕೂ ಹೆಚ್ಚು ಮೀಡಿಯಾ ಹೌಸ್‌ಗಳಲ್ಲಿ ಅತ್ಯಾಕರ್ಷಕ ಸಂಬಳದೊಂದಿಗೆ 200ಕ್ಕೂ ಅಧಿಕ ಉದ್ಯೋಗಗಳು ಲಭ್ಯವಿದೆ. ಝೀ ಎಂಟರ್ಟೈನ್‌ಮೆಂಟ್‌, ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್, ಟೈಮ್ಸ್‌ ಆಫ್‌ ಇಂಡಿಯಾ, ವಿಜಯ ಕರ್ನಾಟಕ, ವಿಜಯವಾಣಿ, ಉದಯವಾಣಿ, ವಾರ್ತಾಭಾರತಿ, ಹೊಸದಿಗಂತ, ಸಂಯುಕ್ತ ಕರ್ನಾಟಕ, ಸುದ್ದಿ ಹಾಗೂ ಇತರ ಮೀಡಿಯಾ ಹೌಸ್ ಗಳಿಂದ ಸಂದರ್ಶನ ನಡೆಯಲಿದೆ.

ಪ್ರಿಂಟ್‌, ಟೆಲಿವಿಷನ್‌, ಮನೋರಂಜನೆ, ಡಿಜಿಟಲ್‌ ಮೀಡಿಯಾ, ಸೋಷಿಯಾ ಮೀಡಿಯಾಗಳಲ್ಲಿ ಉದ್ಯೋಗದ ಬಾಗಿಲುಗಳು ತೆರೆದಿದೆ. ಅಲ್ಲದೆ ಸಂಪಾದಕೀಯ ಮಂಡಳಿ, ಜಾಹೀರಾತು, ಆಡಳಿತ, ಟೆಕ್ನಿಕಲ್‌ ಸಪೋರ್ಟ್‌, ವಿತರಣೆ, ಮಾರ್ಕೆಟಿಂಗ್‌ ಕ್ಷೇತ್ರಗಳಲ್ಲೂ ಸಂದರ್ಶನ ಕರೆಯಲಾಗಿದೆ. ಪತ್ರಕರ್ತರಾಗ ಬಯಸುವವರು, ಗ್ರಾಫಿಕ್‌ ಡಿಸೈನರ್‌, ವಿಡಿಯೋ ಎಡಿಟರ್‌, ಅನುವಾದಕರು, ಕಂಟೆಂಟ್‌ ಕ್ರಿಯೇಟರ್‌, ಸೋಷಿಯಲ್‌ ಮೀಡಿಯಾ ಹಾಂಡ್ಲರ್‌, ಪೇಜ್‌ ಡಿಸೈನರ್‌, ಫೋಟೋಗ್ರಾಫರ್‌, ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಹುದ್ದೆಗಳನ್ನು ಪಡೆಯುವ ಅವಕಾಶವಿದೆ. ಉದ್ಯೋಗಗಳು ನಗರ ಹಾಗೂ ಗ್ರಾಮ ಕೇಂದ್ರಿಕೃತವಾಗಿ ಸಿಗಲಿದೆ. ಕನ್ನಡ, ಇಂಗ್ಲೀಷ್‌, ಹಿಂದಿ, ಮಲಯಾಳಂ, ತೆಲುಗು ಹಾಗೂ ಇತರ ಭಾಷೆಗಳಲ್ಲಿ ಹಿಡಿತವಿರುವವರಿಗೆ ಅದೃಷ್ಟದ ಬಾಗಿಲು ತೆರೆದಿದೆ.

ವಿಶೇಷವೆಂದರೆ ಅನುಭವಿಗಳೂ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎನ್ನುವ ಮಾಹಿತಿ ಲಭಿಸಿದೆ.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ವೆಬ್‌ಸೈಟ್‌  www.alvaspragati.com ಅನ್ನು ನೋಡಬಹುದು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!