ಕರಾವಳಿಯಲ್ಲಿ ಹಾಗೂ ತುಳುನಾಡು ಭಾಗದ ಜನರು ಸಂಭ್ರಮ ಸಡಗರದಿಂದ ಆಟಿ ಅಮಾವಾಸ್ಯೆ ಆಚರಣೆ ಮಾಡುತ್ತಾರೆ, ಆಚರಣೆ ಒಂದೇ ದಿನಕ್ಕೆ ಸೀಮಿತವಾಗಿದ್ದರೂ, ಅದರ ಹೆಸರು, ಆಚರಿಸುವ ಕ್ರಮ, ವಿಧಿ ವಿಧಾನ ಮತ್ತು ಉದ್ದೇಶ ಬೇರೆ ಬೇರೆ ಆಗಿರುತ್ತದೆ. ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯ ದಿನ ಪಾಲೆ/ಹಾಲೆ ಮರದ ಕಷಾಯ ಕುಡಿಯುವುದು ವಾಡಿಕೆಯಾಗಿದ್ದು, ಈ ಮರದ ಪ್ರತೀ ಗೊಂಚಲಲ್ಲೂ ಸಾಮಾನ್ಯವಾಗಿ ಏಳು ಎಲೆಗಳನ್ನು ಹೊಂದಿರುವುದರಿಂದ ಇದನ್ನು ಸಪ್ತಪರ್ಣಿ ಮರ ಎಂದು ಕೂಡ ಕರೆಯಲಾಗುತ್ತದೆ.
ಇದರಲ್ಲಿ ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂಬುದು ಹಿಂದಿನ ಕಾಲದಿಂದ ನಂಬಿಕೊಂಡು ಬಂದಿರುವ ನಂಬಿಕೆ. ಈ ಕಷಾಯವನ್ನು ತುಳುನಾಡಿನ ಜನರು ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುತ್ತಾರೆ. ಅಂದಿನಿಂದ ಮುಂದಿನ ವರ್ಷದ ಆಟಿ ಮಾಸದವರೆಗೂ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂಬುದು ತುಳುನಾಡಿನ ಜನರ ನಂಬಿಕೆ. ಹಿರಿಯರು ಅನುಸರಿಸಿಕೊಂಡು ಬಂದಿರುವ ಈ ಪದ್ಧತಿಗಳನ್ನು ಈಗಲೂ ಶ್ರದ್ಧೆಯಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಪಾಲೆ ಮರದ ತೊಗಟೆಯನ್ನು ತೆಗೆಯಲು ಲೋಹವನ್ನು ಬಳಸಿದರೆ ತೊಗಟೆಯ ಔಷಧೀಯ ಗುಣಗಳು ಕಡಿಮೆಯಾಗುತ್ತದೆಯೆಂದು ಸೂರ್ಯೋದಯಕ್ಕೂ ಮುನ್ನ ಕುಟುಂಬದ ಹಿರಿಯರು ಹೋಗಿ ಕಲ್ಲಿನಿಂದ ಮರದ ತೊಗಟೆಯನ್ನು ಕೆರೆದು ಅದನ್ನು ತರುತ್ತಾರೆ. ಆಟಿ ಅಮಾವಾಸ್ಯೆಯ ದಿನದಂದು ಮದ್ದುಗಳೆಲ್ಲಾ ಹಾಲೆ ಮರದಲ್ಲಿ ಬೆರೆತಿರುತ್ತದೆ ಎಂಬುದು ತುಳುವರ ನಂಬಿಕೆ. ಹಾಗಾಗಿ ಅಂದು ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲೆ ಮರದ ತೊಗಟೆಯ ಕಷಾಯ ಸೇವನೆ ಮಾಡುತ್ತಾರೆ.
ಮದ್ದು ತೆಗೆಯುವ ವಿಧಾನ
ಈ ಹಿಂದೆ ಆಟಿ ಅಮಾವಾಸ್ಯೆಯ ಹಿಂದಿನ ದಿನವೇ ಮನೆಯ ಯಜಮಾನ ಹಾಲೆ ಮರ ಇರುವ ಕಾಡಿಗೋ, ಗುಡ್ಡಕ್ಕೆ ತೆರಳಿ, ಹಾಲೆ ಮರದ ಬುಡದಲ್ಲಿ ‘ವೀಳ್ಯದೆಲೆ’ ಮತ್ತು ‘ಬೆಣಚು ಕಲ್ಲು’ ಇರಿಸಿ ಎಲ್ಲ ಮದ್ದುಗಳು ಈ ಮರದಲ್ಲಿ ಬಂದು ಸೇರಲಿ. ನಾಳೆ ನಾನು ನಿನ್ನಲ್ಲಿಗೆ ಬರುವಾಗ ನೀನು ಮದ್ದು ನೀಡಬೇಕು ಎಂದು ಪ್ರಾರ್ಥಿಸಿ, ನೂಲು ಕಟ್ಟಿ ಮೂಲಿಗೆ ಮಾಡಿ ಬರುತ್ತಾನೆ.
ಆಟಿ ಅಮಾವಾಸ್ಯೆಯಂದು ಬೆಳಗ್ಗಿನ ಜಾವದಲ್ಲೇ ಎದ್ದು, ಹಾಲೆ ಮರ ಇರುವಲ್ಲಿಗೆ ಹೋಗಿ ಕತ್ತಿ, ಕಬ್ಬಿಣ ಇನ್ನಿತರ ಯಾವುದೇ ಸಾಧನ ಬಳಸದೇ ಬೆಣಚು ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆಯಲಾಗುತ್ತದೆ. ಈ ತೊಗಟೆಯನ್ನು ಮನೆಗೆ ತಂದು ಅದರ ಸಿಪ್ಪೆ ತೆಗೆದು ಅರೆಯುವ ಕಲ್ಲಿನಲ್ಲಿ ಅರೆದೋ, ಕಡೆದೋ ಅಥವಾ ಜಜ್ಜಿಯೋ ರಸ ತೆಗೆಯುತ್ತಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19