ಸುರತ್ಕಲ್: ದಿಢೀರ್ ಹೃದಯಾಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟ ಘಟನೆ ಕಾಟಿಪಳ್ಳದ 7ನೇ ಬ್ಲಾಕ್‌ನಲ್ಲಿ ಸಂಭವಿಸಿದೆ. ಇಲ್ಲಿನ ನಿವಾಸಿ ಯೂನಸ್(37) ಮೃತಪಟ್ಟ ದುರ್ದೈವಿ.
ಪತ್ನಿ ಗರ್ಭಿಣಿಯಾಗಿದ್ದುದರಿಂದ ಡೆಲಿವರಿ ಸಮಯದಲ್ಲಿ 15 ದಿನನಗಳ ಕಾಲ ರಜೆ ಹಾಕಿ ಊರಿಗೆ ಬಂದಿದ್ದರು. ಪತ್ನಿಯನ್ನು ಹೆರಿಗೆಗೆಂದು ಆಸ್ಪತ್ರೆಗೆ ಸಾಗಿಸಿದ್ದು, ಸುಸೂತ್ರವಾಗಿ ಹೆರಿಗೆಯಾಗಿತ್ತು. ರಾತ್ರಿಯವರೆಗೂ ಆಸ್ಪತ್ರೆಯಲ್ಲೇ ಇದ್ದ ಯೂನಸ್, ಆಸ್ಪತ್ರೆ ಪಕ್ಕದ ಅಂಗಡಿಯಲ್ಲಿ ಜ್ಯೂಸ್ ಕುಡಿದು ಮನೆಗೆ ಬಂದಿದ್ದರು.
ಸುಸ್ತಾಗಿದ್ದ ಯೂನಸ್ ತಲೆ ತಿರುಗಿ ಬಿದ್ದಿದ್ದು, ತಕ್ಷಣ ಮನೆ ಮಂದಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಷ್ಟರಲ್ಲಿಯೇ ಯೂನಸ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಊರಿನಲ್ಲಿ ಸೂತಕದ ಛಾಯೆ ಆವರಿಸಿದ್ದು, ಯೂನಸ್ ಅಕಾಲಿಕ ಮರಣಕ್ಕೆ ಊರವರೆಲ್ಲಾ ಮರುಗಿದ್ದಾರೆ.