ಕಾಸರಗೋಡು: ದುಬೈನಲ್ಲಿ ಕುಳಿತು ತನ್ನ ಸಂಬಂಧಿಕರನ್ನು ಸೈಬರ್ ಅಪರಾಧ ಜಾಲಕ್ಕೆ ಸಿಲುಕಿಸಿದ್ದ 34 ವರ್ಷದ ಟ್ರಾವೆಲ್ ಏಜೆಂಟ್ ಒಬ್ಬಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ.
ತಳಂಗರ ಮೂಲದ ಸಾಜಿದಾ ಯು. ಮತ್ತು ಮುಟ್ಟತ್ತೋಡಿಯ ಸಬೀರ್ ಬಿಎಂ (32) ಇಬ್ಬರೂ ವಿದೇಶಗಳಲ್ಲಿ ಸೈಬರ್ ಅಪರಾಧ ಜಾಲಗಳಿಗೆ ಮಾರಾಟ ಮಾಡಲು ಬ್ಯಾಂಕ್ ಖಾತೆಗಳನ್ನು ಬಳೆಸುತ್ತಿರುವುದು ಬೆಳಕಿಗೆ ಬಂದಿತ್ತ. ಇದಾದ ನಂತರ ಕಾಸರಗೋಡು ಸೈಬರ್ ಪೊಲೀಸರು ಅವರ ವಿರುದ್ಧ ಲುಕ್ ಔಟ್ ಹೊರಡಿಸಿದ್ದರು. ಸಾಜಿದಾಳನ್ನು ಕಾಸರಗೋಡಿಗೆ ಕರೆತಂದು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸಬೀರ್ ಕೂಡ ದುಬೈನಲ್ಲಿದ್ದಾನೆ. ಅವನು ತನ್ನ ಸೈಬರ್ ಅಪರಾಧ ಚಟುವಟಿಕೆಗಳಿಗೆ ನೆಪವಾಗಿ ಟ್ರಾವೆಲ್ ಏಜೆನ್ಸಿಯನ್ನು ನಡೆಸುತ್ತಿದ್ದನು” ಎಂದು ತನಿಖಾಧಿಕಾರಿ ಎಎಸ್ಐ ರಂಜಿತ್ ಕುಮಾರ್ ಹೇಳಿದ್ದಾರೆ.
ಸಾಜಿದಾ ವಿರುದ್ಧ ಮೊದಲ ದೂರು ಈಕೆಯ ವಿವಾಹ ಸಂಬಂಧಿ ಕುಂಬಡಾಜೆ ಪಂಚಾಯತ್‌ನ 21 ವರ್ಷದ ಮಹಿಳೆಯಿಂದ ಬಂದಿತ್ತು. ಆಕೆಯ ಪ್ರಕಾರ ಸಾಜಿದಾ 2024 ರ ಆರಂಭದಲ್ಲಿ ಹಣ ಪಡೆಯಲು ತನ್ನನ್ನು ಸಂಪರ್ಕಿಸಿದ್ದಳು. ತನ್ನ ಬ್ಯಾಂಕ್ ಖಾತೆಯಲ್ಲಿ ಹಣ ಪಡೆಯಲು ಸಾಧ್ಯವಿಲ್ಲ, ನಿನ್ನ ಹೆಸರಲ್ಲಿ ಖಾತೆ ತೆರೆಯಬಹುದೇ ಎಂದು ಸಾಜಿದಾ ಕೇಳಿದ್ದಳು. ಸಾಜಿದಾಳ ಮಾತು ನಂಬಿ ಯುವತಿ ತನ್ನ ಹೆಸರಲ್ಲಿ ಚೆರ್ಕಳ ಶಾಖೆಯಲ್ಲಿ ಕೆನರಾ ಬ್ಯಾಂಕ್ ಖಾತೆ ತೆರೆದಳು. ಬಳಿಕ ಎಟಿಎಂ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ರುಜುವಾತುಗಳು ಮತ್ತು ಖಾತೆಗೆ ಲಿಂಕ್ ಮಾಡಲಾದ ಸಿಮ್ ಮಾಡಿ ಆಕೆಗೆ ನೀಡಿದ್ದಳು.. ಆನಂತರ ಸಾಜಿದಾ ಎಟಿಎಂ ಕಾರ್ಡ್‌ಗೆ ಅಂತರರಾಷ್ಟ್ರೀಯ ಪ್ರವೇಶ ಮಾಡಿಸಿದ್ದಾಗಿ ಪೊಲೀಸರಲ್ಲಿ ಆಕೆಯ ಸಂಬಂಧಿ ಹೇಳಿದ್ದಾರೆ.
ತಿಂಗಳ ನಂತರ, ದೂರುದಾರರ ಸೋದರಸಂಬಂಧಿಗೆ ಬೆಂಗಳೂರು ಸೈಬರ್ ಪೊಲೀಸರಿಂದ ನೋಟಿಸ್ ಬಂದಿತು, ಅದರಲ್ಲಿ ನೀವು ನ್‌ಲೈನ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದೀರಿ ಎಂದು ಹೇಳಲಾಗಿತ್ತು. ಆಘಾತಕ್ಕೊಳಗಾದ ಅವರು, ಸಾಜಿದಾಗಾಗಿ ಅವರು ತೆರೆದಿದ್ದ ಬ್ಯಾಂಕ್ ಖಾತೆಯನ್ನು ಹಲವಾರು ಲಕ್ಷ ರೂಪಾಯಿಗಳ ವಹಿವಾಟುಗಳಿಗೆ ಬಳಸಲಾಗಿದೆ ಎನ್ನುವುದನ್ನು ಪತ್ತೆಹಚ್ಚಿದ್ದಾರೆ.
ಈ ವಿಷಯವು ಕುಟುಂಬದಲ್ಲಿಯೇ ಚರ್ಚೆ ನಡೆದಾಗ ಬಂದಾಗ ಸಾಜಿದಾ ಕನಿಷ್ಠ ನಾಲ್ಕು ಯುವ ಸಂಬಂಧಿಕರಿಗೆ ಇದೇ ರೀತಿ ಬ್ಯಾಂಕ್ ಖಾತೆಗಳನ್ನು ಮಾಡಿಸಿ, ಎಟಿಎಂ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್ ರುಜುವಾತುಗಳು ಮತ್ತು ಲಿಂಕ್ ಮಾಡಲಾದ ಸಿಮ್ ಕಾರ್ಡ್ ಕೊಡುವಂತೆ ಕೇಳಿರುವುದು ಬೆಳಕಿಗೆ ಬಂದಿದೆ. ಈ ವಿಷಯ ತಿಳಿದು ಗಾಬರಿಗೊಂಡ ಕುಂಬಡಾಜೆಯ ಮೂಲ ದೂರುದಾರೆ ತನ್ನ ಸ್ವಂತ ಖಾತೆಯನ್ನು ಪರಿಶೀಲಿಸಲು ಕೆನರಾ ಬ್ಯಾಂಕ್‌ಗೆ ಭೇಟಿ ನೀಡಿದಾಗ ಮಾರ್ಚ್ 2024 ರಿಂದ ಲಕ್ಷಾಂತರ ರೂಪಾಯಿಗಳನ್ನು ಅದರ ಮೂಲಕ ವರ್ಗಾಯಿಸಲಾಗಿದೆ ಎಂದು ಅವರು ಕಂಡುಕೊಂಡರು.
ನವೆಂಬರ್‌ನಲ್ಲಿ, ನಾಲ್ವರು ಸೋದರಸಂಬಂಧಿಗಳು ಕಾಸರಗೋಡು ಸೈಬರ್ ಪೊಲೀಸರನ್ನು ಸಂಪರ್ಕಿಸಿ ಸಾಜಿದಾ ವಿರುದ್ಧ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದರು, ಅವರ ಮೇಲೆ ದ್ರೋಹ ಮತ್ತು ಸೈಬರ್ ವಂಚನೆ ಆರೋಪ ಹೊರಿಸಿದರು.
ತನಿಖೆಯಲ್ಲಿ ಸಾಜಿದಾ ಗೃಹಿಣಿಯರಾದ ಮತ್ತು ವಿದ್ಯಾರ್ಥಿಗಳಾದ ಕನಿಷ್ಠ ಆರು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಅವರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಮನವೊಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಸಾಜಿದಾ ಪೊಲೀಸರಿಗೆ ಸಬೀರ್ ದೊಡ್ಡ ಸೈಬರ್ ಅಪರಾಧ ಜಾಲದ ಕೊಂಡಿ ಮಾತ್ರ ಎಂದು ಹೇಳಿದ್ದಾಗಿ ವರದಿಯಾಗಿದೆ. ಸಾಜಿದಾ ಅಂತಾರಾಷ್ಟ್ರೀಯ ಲಿಂಕ್ ಹೊಂದಿರುವ ಖಾತೆಗಳನ್ನು ಚೀನೀ ನಿರ್ವಾಹಕರಿಗೆ ಮಾರಾಟ ಮಾಡಿದ್ದಾಳೆ. ಈ ಖಾತೆಳಿಗೆ ಬರುವ ಹಣವನ್ನು ವಿದೇಶದಲ್ಲಿ ಎಟಿಎಂ ಕಾರ್ಡ್‌ಗಳನ್ನು ಬಳಸಿ ಹಿಂಪಡೆಯಲಾಗುತ್ತಿತ್ತು” ಎಂದು ತನಿಖಾಧಿಕಾರಿ ರಂಜಿತ್ ಕುಮಾರ್ ಹೇಳಿದ್ದಾರೆ.