ಬಜ್ಪೆ: ಇನ್ನರ್ ವೀಲ್ ಕ್ಲಬ್, ಮಂಗಳೂರು ದಕ್ಷಿಣ ಮತ್ತು ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು ಇದರ ಆಶ್ರಯದಲ್ಲಿ ನಮ್ಮ ಕ್ಲಿನಿಕ್ ಮಳವೂರು ಸಭಾಂಗಣದಲ್ಲಿ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಇನ್ನರ್ ವೀಲ್ ಮಂಗಳೂರು ದಕ್ಷಿಣದ ಅಧ್ಯಕ್ಷರಾದ ಶೀಜಾ ನಂಬಿಯಾರ್ ಉದ್ಘಾಟಿಸಿ ಮಾತನಾಡಿ, ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಸುಮಾರು 250 ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ. ಈ ಪೈಕಿ 40 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಒಟ್ಟು 66 ಜನರಿಗೆ ಉಚಿತ ಕನ್ನಡಕವನ್ನು ನೀಡಿದ್ದೇವೆ. ಇದು ನಮಗೆ ತುಂಬಾ ಸಂತಸದ ಮತ್ತು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಭೋಜರಾಜ್ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿ ಕುಮಾರಿ ಸಮೀಕ್ಷಾ ಡಿ.ಪಿ., ಇನ್ನರ್ ವಿಲ್ ಕ್ಲಬ್ ನ ಕಾರ್ಯದರ್ಶಿ ಕಲಾವತಿ, ಇನ್ನರ್ ವಿಲ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಶಬರಿ ಭಂಡಾರಿ, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಯ್ಯದ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಲಾ, ಮಾಧವ ಅಮೀನ್ ಕೆಂಜಾರ್ ಮುಂತಾದವರು ಉಪಸ್ಥಿತರಿದ್ದರು. ವಿನಯ್ ಸಾಲ್ಯಾನ್ ಸ್ವಾಗತಿಸಿದರು. ನವೀನ್ ಚಂದ್ರ ಸಾಲ್ಯಾನ್ ವಂದಿಸಿದರು. ರಾಕೇಶ್ ಕುಂದರ್ ನಿರೂಪಿಸಿದರು.