ಉಳ್ಳಾಲ: ಕೊಣಾಜೆ ಠಾಣೆ ವ್ಯಾಪ್ತಿಯ ಮೊಂಟೆಪದವು ಎಂಬಲ್ಲಿ ಮಹಿಳೆ ಸುಂದರಿ(36) ಎಂಬವರನ್ನು ಹತ್ಯೆಗೈದು ಸೊಂಟಕ್ಕೆ ಹಗ್ಗದಿಂದ ಕಲ್ಲು ಕಟ್ಟಿ ಬಾವಿಗೆ ಎಸೆದ ಪ್ರಕರಣ ಸಂಬಂಧ ಆರೋಪಿಯನ್ನು ಬರೋಬ್ಬರಿ ಎರಡು ತಿಂಗಳ ಬಳಿಕ ಬಂಧಿಸಿದ್ದಾರೆ ಎನ್ನಲಾಗಿದೆ.ಬಂದಿದೆ.
ಮೇ 23ರಂದು ಬಾವಿಯೊಳಗೆ ಸಕಲೇಶಪುರ ಮೂಲದ ಸುಂದರಿ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಸುಂದರಿ ಅವರ ಮನೆಗೆ ಬಂದಿದ್ದ ಆರೋಪಿ ಅವರ ಮೇಲೆ ದೌರ್ಜನ್ಯ ಎಸಗಿ, ಕೊಲೆಗೈದು ಸೊಂಟಕ್ಕೆ ಹಗ್ಗದಿಂದ ಕಲ್ಲು ಕಟ್ಟಿ ಬಾವಿಗೆ ಎಸೆದು ಪರಾರಿಯಾಗಿದ್ದ.
ಆರೋಪಿ ಬಿಹಾರ ಮೂಲದವನಾಗಿದ್ದು, ಸ್ಥಳೀಯವಾಗಿ ಗಾರೆ ಕಾರ್ಮಿಕ, ಮರದ ಮಿಲ್‌ನಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ ಎಂದು ತಿಳಿದು ಬಂದಿದೆ.
ಕೊಣಾಜೆ: ಒಂಟಿ ಮಹಿಳೆಯ ಕೊಲೆ? ಕಲ್ಲು ಕಟ್ಟಿ ಎಸೆದ ಸ್ಥಿತಿಯಲ್ಲಿ ಶವ ಪತ್ತೆ!