ಕೊಣಾಜೆ: ಒಂಟಿ ಮಹಿಳೆಯ ಕೊಲೆ? ಕಲ್ಲು ಕಟ್ಟಿ ಎಸೆದ ಸ್ಥಿತಿಯಲ್ಲಿ ಶವ ಪತ್ತೆ!


ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮೋಟೆಪದವು ಸಮೀಪ ಒಂಟಿಯಾಗಿ ವಾಸಿಸುತ್ತಿದ್ದ ಸಕಲೇಶಪುರ ಮೂಲದ ಮಹಿಳೆಯೊಬ್ಬರ ಮೃತದೇಹ ದೇಹದ ಭಾಗಕ್ಕೆ ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
ಸಕಲೇಶಪುರ ಮೂಲದ ಸುಂದರಿ (35) ಪರಿಸರದಲ್ಲಿ ಮನೆ ಕೆಲಸಕ್ಕೆ ತೆರಳಿ ಜೀವನ ನಿರ್ವಹಿಸುತ್ತಿದ್ದು ಮನೆಯಲ್ಲಿ ಒಂಟಿಯಾಗಿದ್ದರು ಎನ್ನಲಾಗಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ವಾರದ ಹಿಂದೆಯೇ ಘಟನೆ ನಡೆದಿರುವ ಸಾಧ್ಯತೆ ಇದೆ. ಕೊಣಾಜೆ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

error: Content is protected !!