ವಾಟ್ಸ್ಯಾಪ್‌ನಲ್ಲಿ ಕೋಮುದ್ವೇಷ, ಸುಳ್ಳಾರೋಪ ಪ್ರಕರಣದ ಆರೋಪಿ ಅರೆಸ್ಟ್‌: ಕೋಡಿಕೆರೆ ಲೋಕೇಶ್‌ ಬಾಡಿವಾರಂಟ್‌ನಲ್ಲಿ ವಶಕ್ಕೆ: ಕಮಿಷನರ್

ಸುರತ್ಕಲ್: ವಾಟ್ಸ್ಯಾಪ್‌ನಲ್ಲಿ ಕೋಮು ದ್ವೇಷ ಮತ್ತು ಸುಳ್ಳು ಆರೋಪಗಳನ್ನು ಪ್ರಚಾರ ಮಾಡಿದ ಆರೋಪದಲ್ಲಿ ಕುಳಾಯಿ ಗ್ರಾಮದ ಕೆ.ಕೆ. ಶೆಟ್ಟಿ ಕಾಂಪೌಂಡ್ ನಿವಾಸಿ ರಾಮ ಪ್ರಸಾದ್ ಯಾನೆ ಪೋಚ(42) ಎಂಬಾತನನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಪ್ರಸಕ್ತ ಉಡುಪಿ ಜಿಲ್ಲಾ ಹಿರಿಯಡ್ಕ ಕಾರಾಗೃಹದಲ್ಲಿರುವ ಸುರತ್ಕಲ್ ಕೋಡಿಕೆರೆ ನಿವಾಸಿ ಲೋಕೇಶ್ ಎಂಬಾತನನ್ನು ಬಾಡಿ ವಾರೆಂಟ್ ಪಡೆದು ಸುರತ್ಕಲ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟನೆಯ ವಿವರ: ದೂರುದಾರ ರಾಜೇಶ್, ಹೊನ್ನಕಟ್ಟೆ, ಕುಳಾಯಿ ಎಂಬವರು ಹೊಸಬೆಟ್ಟು ಸುರತ್ಕಲ್ ನಲ್ಲಿ RV Enterprises ಎಂಬ ಸಂಸ್ಥೆಯನ್ನು ನಡೆಸಿಕೊಂಡಿದ್ದಾರೆ. ಆದರೆ ವಾಟ್ಸಪ್ ಗ್ರೂಪ್‌ಗಳಲ್ಲಿ ಇವರ ಬಗ್ಗೆ ಸುಮಾರು 20 ಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡುದ್ದಲ್ಲದೇ ಬ್ಲೂ ಫಿಲಂ ಸಿಡಿ ಮಾರಾಟ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಕಚೇರಿಯಲ್ಲಿರುವ ಯುವತಿಯರನ್ನು ಮತಾಂತರ ಮಾಡಿದ್ದಾರೆ. ಹಾಗೂ 24 ವರ್ಷ ಪ್ರಾಯದ ಹಿಂದೂ ಯುವತಿಯನ್ನು ತನ್ನ ತಮ್ಮನಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ.  ಹಿಂದೂ ಯುವತಿ ಹಣೆಗೆ ಕುಂಕುಮ ಹಾಕುವುದನ್ನು, ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ ಚರ್ಚ್ಗೆ ಪ್ರಾರ್ಥನೆಗೆ ತಪ್ಪದೇ ಹಾಜರಾಗುತ್ತಿರುತ್ತಾಳೆ ಎಂದು ಪಿರ್ಯಾದಿದಾರರ ಬಗ್ಗೆ ಸುಳ್ಳು ಆರೋಪಿಸಿ ಕೋಮುದ್ವೇಷ ಸಂದೇಶಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿಬಿಟ್ಟ ಆರೋಪಿಗಳ ಮೇಲೆ ದೂರು ನೀಡಿದ್ದರು. . ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಿ.13-07-2025 ರಂದು ಅ.ಕ್ರ. 93/2025 U/S 352,353(1),353(2) BNS ನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ತನಿಖಾಧಿಕಾರಿ ಸುರತ್ಕಲ್ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರಘು ನಾಯ್ಕ್ ಈ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಸಿಬ್ಬಂದಿ ಹೆಚ್.ಸಿ ಅಣ್ಣಪ್ಪ ವಂಡ್ಸೆ ಅವರೊಂದಿಗೆ ತೆರಳಿ ಆರೋಪಿ ರಾಮ್ ಪ್ರಸಾದ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ ತಪ್ಪೊಪ್ಪಿಕೊಂಡ ಮೇರೆಗೆ ಆತನನ್ನು ದಸ್ತಗಿರಿ ಮಾಡಿ ಮಾನ್ಯ 2 ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಮಂಗಳೂರಿಗೆ ಹಾಜರುಪಡಿಸಿದ್ದು, ನ್ಯಾಯಾಯಲಯ ನ್ಯಾಯಾಂಗ ಬಂಧನ ವಿಧಿಸಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

 

error: Content is protected !!