ಮಂಗಳೂರು: ಹಳೆಯಂಗಡಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಪಂಪ್ ನಲ್ಲಿ ರಿಕ್ಷಾಕ್ಕೆ ಪೆಟ್ರೋಲ್ ಹಾಕಿಸಿದರೆ ಅದ್ರಲ್ಲಿ ನೀರು ಮಿಕ್ಸ್ ಆಗಿದೆ. ಈ ಬಗ್ಗೆ ಹಿಂದೆಯೂ ದೂರು ನೀಡಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಆರೋಪಿಸಿದ್ದಾರೆ. ರಿಕ್ಷಾ ಚಾಲಕರು ತಮ್ಮ ಕೈಯಲ್ಲಿ ನೀರು ಮಿಕ್ಸ್ ಆಗಿರುವ ಪೆಟ್ರೋಲ್ ಬಾಟಲಿ ಹಿಡಿದು ವಿಡಿಯೋ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಪಡುಪಣಂಬೂರು ಹೆದ್ದಾರಿ ಪಕ್ಕದ ಪೆಟ್ರೋಲ್ ಪಂಪ್ ನಲ್ಲಿ ರಿಕ್ಷಾ ಚಾಲಕರು 200 ರೂ. ಪೆಟ್ರೋಲ್ ಹಾಕಿದ್ದು ಅವರ ರಿಕ್ಷಾ ಸ್ವಲ್ಪ ಮುಂದಕ್ಕೆ ಹೋಗಿ ನಿಂತುಬಿಟ್ಟಿತ್ತು. ಪೆಟ್ರೋಲ್ ತೆಗೆದು ಪರೀಕ್ಷಿಸಿದಾಗ ನೀರು ಮಿಶ್ರಣ ಮಾಡಿರುವುದು ಗಮನಕ್ಕೆ ಬಂತು ಎಂದು ರಿಕ್ಷಾ ಚಾಲಕರು ದೂರಿದ್ದಾರೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t