ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಹೊತ್ತಿ ಉರಿದ ಲಘು ವಿಮಾನ

ಲಂಡನ್: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಸಣ್ಣ ವಿಮಾನ(ಬೀಚ್‌ಕ್ರಾಫ್ಟ್ ಬಿ200 ಸೂಪರ್ ಕಿಂಗ್)ವೊಂದು ಲಂಡನ್ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.

ಜೆಟ್ ಬೀಚ್‌ಕ್ರಾಫ್ಟ್ ಬಿ200 ಸೂಪರ್ ಕಿಂಗ್ ವಿಮಾನವು ವೈದ್ಯಕೀಯ ಸಾರಿಗೆ ಸೇವೆ ಒದಗಿಸುತ್ತಿದ್ದು, ಸುಮಾರು 12 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.

ವಿಮಾನವು ಲಂಡನ್ ನಿಂದ ನೆದರ್ಲ್ಯಾಂಡ್ ಗೆ ಹಾರಾಟ ನಡೆಸಿದ್ದ ವೇಳೆಯೇ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಘಟನೆ ಬಳಿಕ ವಿಮಾನ ನಿಲ್ದಾಣದಿಂದ ಕೆಲವು ಹೊತ್ತು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು.

ಘಟನೆಯಲ್ಲಿ ಸಾವು ನೋವಿನ ಬಗ್ಗೆ ಇದುವರೆಗೂ ವರದಿಯಾಗಿಲ್ಲ ಎನ್ನಲಾಗಿದೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!