ʻಮಿಸ್‌ ವರ್ಲ್ಡ್‌ ಬ್ಲ್ಯಾಕ್‌ ಬ್ಯೂಟಿʼ ಆತ್ಮಹತ್ಯೆ: ಕಪ್ಪು ಸುಂದರಿಯ ಬದುಕಲ್ಲಿ ಏನಾಯಿತು?

ಪುದುಚೇರಿ: ʻಮಿಸ್‌ ವರ್ಲ್ಡ್‌ ಬ್ಲ್ಯಾಕ್‌ ಬ್ಯೂಟಿʼ ವಿಜೇತೆ, ಪುದುಚೇರಿಯ ಪ್ರಸಿದ್ಧ ಮಾಡೆಲ್ ಸ್ಯಾನ್ ರಾಚೆಲ್ (25)(Miss world black beauty winner San Rachel suicide) ಅಧಿಕ ರಕ್ತದೊತ್ತಡ ಮಾತ್ರೆಗಳನ್ನು ಸೇವಿಸಿ ತನ್ನ ಕರಮಣಿಕುಪ್ಪಂನಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಂಕರಪ್ರಿಯಾ ಎಂದೂ ಕರೆಯಲ್ಪಡುವ ರಾಚೆಲ್, ಮಿಸ್ ಪಾಂಡಿಚೇರಿ (2020–2021), ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು (2019), ಮತ್ತು ಬ್ಲ್ಯಾಕ್ ಬ್ಯೂಟಿ ವಿಭಾಗದಲ್ಲಿ ಮಿಸ್ ವರ್ಲ್ಡ್ ಸೇರಿದಂತೆ ಹಲವಾರು ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದಿದ್ದರು ಅಲ್ಲದೆ ಫ್ಯಾಷನ್ ಶೋ ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದರು.

ಮೂಲಗಳಿಂದ ಲಭಿಸಿದ ಪ್ರಕಾರ, ಜೂನ್ 5 ರಂದು ರಾಚೆಲ್ ಸುಮಾರು 50 ರಕ್ತದೊತ್ತಡ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಳಗಾಗಿ ಜಿಪ್ಮರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಡೆತ್‌ನೋಟ್‌ ಪತ್ತೆಯಾಗಿದ್ದು, ಅದರಲ್ಲಿ ಅವರು ತನ್ನ ಸಾವಿಗೆ ಪತಿ ಮತ್ತು ಅತ್ತೆ ಕಾರಣರಲ್ಲ ಎಂದು ಅವರು ಬರೆದಿದ್ದಾರೆ.

ಫ್ಯಾಷನ್ ಕಾರ್ಯಕ್ರಮಗಳನ್ನು ಆಯೋಜಿಸಲು ಪಡೆದ ಸಾಲಗಳು ಸೇರಿದಂತೆ ಆರ್ಥಿಕ ಸಮಸ್ಯೆಗಳಿಂದಾಗಿ ಅವರು ಮಾನಸಿಕ ಒತ್ತಡದಲ್ಲಿದ್ದರು ಎಂದು ತನಿಖೆಗಳು ಸೂಚಿಸುತ್ತವೆ. ಉರುಲಯನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಚೆಲ್ ಮೈಬಣ್ಣ ಪಕ್ಷಪಾತ ಪ್ರಶ್ನಿಸಿ ಹೆಸರುವಾಸಿಯಾಗಿದ್ದರು. ಮೈ ಬಣ್ಣ ಆತ್ಮವಿಶ್ವಾಸವನ್ನು ಕುಗ್ಗಿಸಬಾರದು, ಆತ್ಮವಿಶ್ವಾಸ ಬೆಳೆಸಬೇಕೆಂದು ಅನೇಕರಿಗೆ ಸ್ಫೂರ್ತಿ ತುಂಬಿದ್ದರು.

error: Content is protected !!