ರೀಲ್ಸ್‌ ಗಾಗಿ ಸ್ಟಂಟ್ ಮಾಡಲು ಹೋಗಿ 300 ಅಡಿ ಆಳಕ್ಕೆ ಬಿದ್ದ ಕಾರು – ಯುವಕನ ಸ್ಥತಿ ಗಂಭೀರ

ಮಹಾರಾಷ್ಟ್ರ: ಜುಲೈ 9 ರಂದು ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಮಹಾರಾಷ್ಟ್ರದ ಕರಾಡ್‌ನ ಪಠಾಣ್-ಸದವಘಾಪುರ ರಸ್ತೆಯಲ್ಲಿರುವ ಜನಪ್ರಿಯ ಟೇಬಲ್ ಪಾಯಿಂಟ್‌ನಲ್ಲಿ ಕಾರಿನಲ್ಲಿ ಸ್ಟಂಟ್‌ ಮಾಡುವ ರೀಲ್ಸ್‌ ಮಾಡೋಕೆ ಹೋಗಿ ಕಾರು ಚಾಲಕ ಸಮೇತವಾಗಿ 300 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಇದರ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

ಗಂಭೀರ ಗಾಯಗೊಂಡ ಯುವಕನನ್ನು ಕರಾಡ್ ಗೋಲೇಶ್ವರದ ನಿವಾಸಿ ಸಾಹಿಲ್ ಜಾಧವ್(20) ಎಂದು ಹೇಳಲಾಗುತ್ತಿದೆ.

ಮೊದಲು ಕಾರಿನಲ್ಲಿ ನಾಲ್ವರು ಕುಳಿತ್ತಿದ್ದು ರೀಲ್ಸ್ ಗಾಗಿ ವಿಡಿಯೋ ಮಾಡುದಕ್ಕೋಸ್ಕರ ನಾಲ್ವರು ಕಾರಿನಿಂದ ಇಳಿದಿದ್ದು ಸಾಹಿಲ್ ಮಾತ್ರ ಕಾರಿನಲ್ಲಿ ಸ್ಟಂಟ್ ಮಾಡಿದ್ದಾನೆ. ಇತ್ತ ಸ್ನೇಹಿತರು ವಿಡಿಯೋ ಮಾಡುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ಗೆಳೆಯರ ಕಣ್ಣೆದುರೇ ಕಂದಕಕ್ಕೆ ಉರುಳಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕೆಲ ದೂರದಲ್ಲಿ ಸಾಹಿಲ್ ಗಂಭೀರ ಗಾಯಗೊಂಡು ಬಿದ್ದಿರುವುದು ಕಂಡು ಬಂದಿದೆ ಸ್ನೇಹಿತರ ಸಹಾಯದಿಂದ ಸಾಹಿಲ್ ನನ್ನು ಕರಾಡ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!