ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆಸೆ ತೋರಿಸಿ ಚಿನ್ನಾಭರಣ, ನಗದು ಪಡೆದು ವಂಚನೆ

ಕೋಟ: ಕೋಟ ಠಾಣೆ ವ್ಯಾಪ್ತಿಯ ಮೊಳಹಳ್ಳಿಯಲ್ಲಿ ಮಹಿಳೆಯೋರ್ವಳು ಹಣ ಡಬಲ್‌ ಮಾಡಿಕೊಡುವುದಾಗಿ ಆಸೆ ತೋರಿಸಿ ಇನ್ನೋರ್ವ ಮಹಿಳೆಗೆ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಮೊಳಹಳ್ಳಿಯ ನಿವಾಸಿ ಮಾಲತಿ ವಂಚನೆಗೊಳಗಾದವರು. ಬಿಲ್ಲಾಡಿಯ ಜಾನುವಾರುಕಟ್ಟೆ ನಿವಾಸಿ ಸುಶೀಲಾ ಪ್ರಕರಣ ಆರೋಪಿ.

ಈಕೆ ಮಾಲತಿ ಅವರಿಗೆ 2022ರ ಜನವರಿಯಲ್ಲಿ ತಾನು ಚಾಲೆಂಜಿಗ್‌ ಫೌಂಡೇಶನ್‌ ಸಂಸ್ಥೆಯ ಸದಸ್ಯೆ ಹಾಗೂ ದಲಿತ ಸಂಘಟನೆಯ ಪ್ರಮುಖಳು ಎಂದು ಪರಿಚಯ ಮಾಡಿ ನಮ್ಮ ಸಂಸ್ಥೆಯಲ್ಲಿ 1.60 ಲಕ್ಷ ರೂ. ಡೆಪಾಸಿಟ್‌ ಇಟ್ಟಲ್ಲಿ 16ಲಕ್ಷ ರೂ. ಸಿಗುವುದಾಗಿ ಅದರಲ್ಲಿ 8 ಲಕ್ಷ ಸಬ್ಸಿಡಿ ಸಿಗುವುದಾಗಿ ನಂಬಿಸಿ 1.60 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಳು. ಇದರಲ್ಲಿ ಜಿಎಸ್‌ಟಿ ಹಣ ಕಡಿತಗೊಳ್ಳುತ್ತದೆ ಅದಕ್ಕಾಗಿ ಇನ್ನೂ ಹೆಚ್ಚು ಹಣ ನೀಡಬೇಕು ಎಂದು ತಿಳಿಸಿದ್ದು ಅದಕ್ಕೆ ಮಾಲತಿಯವರು ನನ್ನ ಬಳಿ ಹಣ ಇಲ್ಲ ಎಂದು ತಿಳಿಸಿದಕ್ಕೆ ಚಿನ್ನಾಭರಣಗಳನ್ನು ನೀಡುವಂತೆಯೂ ಅದನ್ನು ತನ್ನ ಹೆಸರಿನಲ್ಲಿ ಅಡವಿಡಿಸಿ ಸಾಲ ಪಡೆದು ಸಂಸ್ಥೆಗೆ ಕಟ್ಟುವುದಾಗಿ ಹೇಳಿ ಅನಂತರ ಹಣ ದೊರೆತ ಬಳಿಕ ಚಿನ್ನಾಭರಣಗಳನ್ನು ಬಿಡಿಸಬಹುದು ಎನ್ನುವುದಾಗಿ ನಂಬಿಸಿ 20 ಗ್ರಾಂ ತೂಕದ ಒಂದು ಚಿನ್ನದ ಕರಿಮಣಿ ಸರ, 4 ಗ್ರಾಂ ತೂಕದ ಉಂಗುರ , 31 ಗ್ರಾಂ ತೂಕದ ಹವಳದ ಸರವನ್ನು ಪಡೆದುಕೊಂಡಿದ್ದಾಳೆ.

ಸಾಕಷ್ಟು ಸಮಯವಾದರೂ ಹಣ ಹಾಗೂ ಚಿನ್ನ ಎರಡನ್ನೂ ನೀಡದಿದ್ದಾಗ ಸುಶೀಲಾಳನ್ನು ವಿಚಾರಿಸಿದಕ್ಕೆ ಚಿನ್ನವನ್ನು ಸೊಸೈಟಿಯಲ್ಲಿ ಅಡಮಾನವಿರಿಸಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಅನುಮಾನಗೊಂಡು ತೀವ್ರವಾಗಿ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾಳೆ.

ಹಾಗಾಗಿ 1.60 ಲಕ್ಷ ರೂ. ಮತ್ತು 2.70 ಲಕ್ಷ ರೂ. ಮೌಲ್ಯದ 55 ಗ್ರಾಂ ಚಿನ್ನಾಭರಣಗಳನ್ನು ನಾನು ಕಳೆದುಕೊಂಡಿದ್ದು ನ್ಯಾಯ ಕೊಡಿಸುವಂತೆ ಮಾಲತಿ ಕೋಟ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!