ಖ್ಯಾತ ಟೆನಿಸ್‌ ಆಟಗಾರ್ತಿಯನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದು ಯಾಕೆ?

ಚಂಡೀಗಡ: ಟೆನ್ನಿಸ್ ಅಕಾಡೆಮಿಯನ್ನು ಮುಚ್ಚಲು ನಿರಾಕರಿಸಿದ ಖ್ಯಾತ ಟೆನಿಸ್‌ ಆಟಗಾರ್ತಿ ಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

Tennis Player Radhika Yadav Was Cooking Breakfast When Father Shot Her
ಹತ್ಯೆಯಾದ ಟೆನ್ನಿಸ್ ಆಟಗಾರ್ತಿಯನ್ನು ರಾಧಿಕಾ ಯಾದವ್ (25) ಎಂದು ಗುರುತಿಸಲಾಗಿದೆ. ದೀಪಕ್ ಯಾದವ್ (47) ಆರೋಪಿ ತಂದೆ. ರೀಲ್ಸ್ ನೋಡುತ್ತಿದ್ದಕ್ಕೆ ಟೆನ್ನಿಸ್ ಆಟಗಾರ್ತಿಯನ್ನು ತಂದೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಊಹಿಸಲಾಗಿತ್ತು. ಪೊಲೀಸರ ತನಿಖೆ ವೇಳೆ ನಿಜಾಂಶ ಬಯಲಾಗಿದೆ.

Tennis Player Radhika Yadav Shot Dead by Father in Gurugram

ಟೆನ್ನಿಸ್ ಆಟಗಾರ್ತಿಯಾಗಿದ್ದ ರಾಧಿಕಾ ಯಾದವ್ ಅವರಿಗೆ ಕೆಲ ದಿನಗಳ ಹಿಂದೆ ಪಂದ್ಯವೊಂದರಲ್ಲಿ ಭುಜದ ಭಾಗಕ್ಕೆ ಗಾಯವಾಗಿತ್ತು. ಇದರಿಂದಾಗಿ ಅವರು ಮಕ್ಕಳಿಗೆ ತರಬೇತಿ ನೀಡಲು ನೂತನ ಟೆನ್ನಿಸ್ ಅಕಾಡೆಮಿಯನ್ನು ಆರಂಭಿಸಿದ್ದರು. ಆದರೆ ಆಕೆಯ ತಂದೆ ದೀಪಕ್ ಯಾದವ್, ಅಕಾಡೆಮಿಯನ್ನು ಮುಚ್ಚಬೇಕೆಂದು ಮಗಳ ಬಳಿ ಹೇಳಿದ್ದರು.

Tennis Player murder

ದೀಪಕ್ ಯಾದವ್ ಬಳಿ ಜನರು ತಮ್ಮ ಮಗಳ ಗಳಿಕೆಯಿಂದ ಬದುಕುತ್ತಿದ್ದೀರಿ ಎಂದು ಹಿಯಾಳಿಸುತ್ತಿದ್ದರು. ಇದರಿಂದ ದೀಪಕ್ ಅವರು ಅಕಾಡೆಮಿಯನ್ನು ಮುಚ್ಚುವಂತೆ ಹೇಳಿದ್ದರು. ಆದರೆ ಮಗಳು ತಂದೆಯ ಈ ಮಾತಿಗೆ ನಿರಾಕರಿಸಿದ್ದಳು. ಹೀಗಾಗಿ ಜು. 10ರಂದು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಗಳಿಗೆ ಹಿಂದಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

Radhika Yadav, Deepak Yadav, Tennis Player Murder: A Music Video Surfaces  Amid Probe Into Tennis Player's Murder By Father

ಗುಂಡಿನ ಸದ್ದು ಕೇಳುತ್ತಿದ್ದಂತೆ ಮೊದಲ ಮಹಡಿಗೆ ರಾಧಿಕಾ ಚಿಕ್ಕಪ್ಪ ಧಾವಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಧಿಕಾಳನ್ನು ತಕ್ಷಣ ಗುರುಗ್ರಾಮದಲ್ಲಿರುವ ಏಷ್ಯಾ ಮೊರಿಂಗೊ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ವೈದ್ಯರು ದೃಢಪಡಿಸಿದ್ದರು.

Etv Bharat
ಘಟನೆ ಕುರಿತು ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ತಂದೆ ದೀಪಕ್ ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!