ಸುಳ್ಯ: ಖಾಸಗಿ ಬಸ್ಸಿನಲ್ಲಿ ಸಿಕ್ಕಿದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬಸ್ಸಿನ ನಿರ್ವಾಹಕ ಶಶಾಂಕ್ ಪ್ರಾಮಾಣಿಕತೆಯಿಂದ ಮೆರೆದಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಮಂಡೆಕೋಲು ಮಾರ್ಗವಾಗಿ ಅಡೂರು ಕಡೆಗೆ ಬಸ್ಸು ಸಂಚರಿಸುತ್ತಿದ್ದು. ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕೆಳಗೆಬಿದ್ದು, ಬಸ್ ನಿರ್ವಾಹಕನ ಕೈಗೆ ಸಿಕ್ಕಿದೆ. ಆ ಸರವನ್ನು ಬಸ್ ನಿರ್ವಾಹಕರು ತಮ್ಮ ಮಾಲಕ ಮೋಹನ್ ಗುರೂಜಿ ಅವರಿಗೆ ಒಪ್ಪಿಸಿದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದಾಗ ಸರದ ವಾರಸುದಾರ ಅಡೂರು ಮೂಲದ ಸಿರಾಜುದ್ದೀನ್ ಎಂಬವರು ಸುಳ್ಯಕ್ಕೆ ಬಂದು ಬಸ್ ಚಾಲಕ ಮತ್ತು ನಿರ್ವಾಹಕರಿಂದ ಗುರುತು ಹೇಳಿ ಸರವನ್ನು ಪಡೆದುಕೊಂಡರು. ನಿರ್ವಾಹಕನ ಪ್ರಾಮಾಣಿಕತೆಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t