ಕೋಟ: ಕೋಳಿ ಅಂಕದಲ್ಲಿ ನಿರತರಾಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದ ಘಟನೆ ಜು.6ರಂದು ಹಳ್ಳಾಡಿಯ ಗಾವಳಿಯಲ್ಲಿ ನಡೆದಿದೆ.
ಮಂಜುನಾಥ , ವಿನಯ ಕುಮಾರ, ಗುರುರಾಜ, ವಿಶ್ವನಾಥ ಬಿ., ಸುರೇಶ, ಚಂದ್ರ, ಅಣ್ಣಪ್ಪ ಪೂಜಾರಿ, ಪ್ರದೀಪ, ಪ್ರಿತೇಶ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ತಾವು ಜೂಜಾಟದಲ್ಲಿ ನಿರತರಾಗಿದ್ದಾಗಿ ಬಾಯ್ಬಿಟ್ಟಿದ್ದಾರೆ. ಸ್ಥಳದಲ್ಲಿ 31,120 ರೂ ನಗದು ಹಾಗೂ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಗಾವಳಿಯ ಅವಿನಾಶ್ ಎಂಬಾತನ ಸೂಚನೆ ಮೇರೆಗೆ ಕೋಳಿ ಜೂಜಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾವಳಿ ಬ್ರಹ್ಮಸ್ಥಾನದ ಬಳಿಯ ಹಾಡಿಯಲ್ಲಿ ಮನೋರಂಜನೆ ಹಾಗೂ ಹಣವನ್ನು ಪಣವಾಗಿ ಜೂಜಾಟಕ್ಕಾಗಿ ಕೋಳಿ ಅಂಕ ಆಡುತ್ತಿರುವ ಬಗ್ಗೆ ಕೋಟ ಪೊಲೀಸರಿಗೆ ಮಾಹಿತಿ ಬಂದಿದ್ದು ಠಾಣಾಧಿಕಾರಿ ರಾಘವೇಂದ್ರ ಸಿ.ಅವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.