ಕರಾವಳಿಯಲ್ಲಿ ಮತ್ತೇ ಕಡಲಿಗಿಳಿದ ಸಾಂಪ್ರದಾಯಿಕ ಮೀನುಗಾರರು

ಉಡುಪಿ: ಕರಾವಳಿಯಲ್ಲಿ ಮುಂಗಾರು ಅಬ್ಬರದ ಹಿನ್ನಲೆ ಕಡಲಿಗೆ ಇಳಿಯಲು ಹಿಂದೇಟು ಹಾಕಿದ್ದ ನಾಡದೋಣಿ ಮೀನುಗಾರರು ಇದೀಗ ಮತ್ತೇ ಮೀನುಗಾರಿಕೆಗೆ ಮುಂದಾಗಿದ್ದು, ಸ್ಥಗಿತಗೊಂಡಿದ್ದ ಮೀನುಗಾರಿಕೆ ಪರಿಣಾಮ ಮೀನುಗಳ ದರ ದುಪ್ಪಟ್ಟಾಗಿದೆ. ಇದೀಗ ಕೊನೆಗೂ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಮೀನುಗಳ ಖಾದ್ಯಪ್ರಿಯರು ಇನ್ನಾದರೂ ಮೀನಿನ ದರ ಇಳಿಯಬಹುದು ಎಂದು ಕಾಯುತ್ತಿದ್ದಾರೆ. ಅಬ್ಬರದ ಗಾಳಿ ಮಳೆ ನಡುವೆ ನಾಡ ದೋಣಿಗಳಲ್ಲಿ ಮೀನು ಹಿಡಿಯುವುದೇ ಮೀನುಗಾರರಿಗೆ ಒಂದು ಸವಾಲಾಗಿರುತ್ತದೆ. ಇದೀಗ ಕಡಲ ಮಕ್ಕಳು ತಮ್ಮ ಜೀವನಾಧಾರಕ್ಕಾಗಿ ಮೀನುಗಾರಿಕೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಮಳೆಯ ಅಬ್ಬರವೂ ಕೊಂಚ ತನ್ನಗಾಗಿದ್ದರೂ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/FxkiqQfrxlV57ZfFGy2ssw?mode=r_t

error: Content is protected !!