ಬಂಟ್ವಾಳದಲ್ಲಿ ಅಪ್ರಾಪ್ತ ಬಾಲಕ ನೇಣುಬಿಗಿದು ಆತ್ಮಹತ್ಯೆ

ಬಂಟ್ವಾಳ: ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಅಪ್ರಾಪ್ತ ಬಾಲಕನೊರ್ವ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 7 ರಂದು ಸಂಜೆ ವೇಳೆ ನಡೆದಿದೆ. ತುಂಬೆ ನಿವಾಸಿ ಕರುಣಾಕರ ಗಟ್ಟಿ ಅವರ ಏಕೈಕ ಪುತ್ರ ತೇಜಸ್ ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಮೊಡಂಕಾಪು ಕಾಲೇಜೊಂದರಲ್ಲಿ ತೇಜಸ್ ಪಿಯುಸಿ ವಿದ್ಯಾರ್ಥಿಯಾಗಿದ್ದು, ಸಂಜೆ ವೇಳೆ ಕ್ಲಾಸಿನಿಂದ ಮನೆಗೆ ಬಂದಿದ್ದಾನೆ. ತಂದೆ ತಾಯಿ ಇಬ್ಬರು ‌ಖಾಸಗಿ ಕೆಲಸದಲ್ಲಿದ್ದು ಮನೆಗೆ ಬರುವಾಗ ರಾತ್ರಿಯಾಗುತ್ತದೆ.

ತಂದೆ ಮನೆಗೆ ಬಂದಾಗ ಬಾಗಿಲು ಹಾಕಿದ್ದು ಕಂಡು ಮನೆಯೊಳಗೆ ನೋಡಿದಾಗ ಕೋಣೆಯಲ್ಲಿ ಈತ ನೇಣು ಬಿಗಿದು ನೇತಾಡುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಆತ ಮೃತಪಟ್ಟಿರುವುದಾಗಿ ವೈದ್ಯರು‌ ಪರೀಕ್ಷಿಸಿ ತಿಳಿಸಿದ್ದಾರೆ. ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ, ತುಂಬೆ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/FxkiqQfrxlV57ZfFGy2ssw?mode=r_t

error: Content is protected !!