ಕೊಡಗಿನಿಂದ ನಾನೇ ಫಸ್ಟ್ ಎಂದ ಮಂದಣ್ಣಳನ್ನು ಕ್ಷಮಿಸಿ ಎಂದ ಪೂಣಚ್ಚ!

ಬೆಂಗಳೂರು: ʻಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ, ನಾನೇ ಫಸ್ಟ್ ಅನ್ನಿಸುತ್ತೆʼ ಎಂಬ ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಕೊಡವ ಸಮುದಾಯದ ಹಿರಿಯ ನಟ ನಟಿಯರ ಆಕ್ರೋಶಕ್ಕೆ ಕಾರಣವಾಗಿದೆ. ಮಂದಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟಿ ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ ಹೇಳಿಕೆ ವಿವಾದ ಅಂತ ಹೇಳಲ್ಲ. ಅವರು ಗೊತ್ತಿಲ್ಲದೇ ಬೈ ಮಿಸ್ ಆಗಿ ಹೇಳಿರಬೇಕು ಕ್ಷಮಿಸಿಬಿಡೋಣ ಅಂತ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಹೇಳಿಕೆಯನ್ನ ಕ್ಷಮಿಸಿಬಿಡೋಣ. ರಶ್ಮಿಕಾ ಮಂದಣ್ಣ ಬಗ್ಗೆ ನೆಗೆಟಿವ್ ಮಾತಾಡೋದು ಬೇಡ. ನಾನಂತೂ ರಶ್ಮಿಕಾ ಅವರ ಬಗ್ಗೆ ನೆಗೆಟಿವ್ ಮಾತಾಡಲ್ಲ ಅಂತ ತಿಳಿಸಿದ್ದಾರೆ.

 

ರಶ್ಮಿಕಾ ಮಂದಣ್ಣ ಹೇಳಿಕೆ ವಿವಾದ ಅಂತ ಹೇಳಲ್ಲ. ಅವರು ಗೊತ್ತಿಲ್ಲದೇ ಬೈ ಮಿಸ್ ಆಗಿ ಹೇಳಿರಬೇಕು. ತೆಲುಗು, ತಮಿಳು, ಬಾಲಿವುಡ್ ಅಲ್ಲಿ ಹೆಸರು ಮಾಡಿರುವ ಮೊದಲ ನಟಿ ಅಂತ ಹೇಳೋಕೆ ಹೊರಟಿರಬೇಕು. ರಶ್ಮಿಕಾ ಮಂದಣ್ಣ ಬಗ್ಗೆ ನನಗೆ ಗೌರವವಿದೆ. ಅವರು, ಒಳ್ಳೆ ಹೆಸರು ಮಾಡಿದ್ದಾರೆ. ಆದ್ರೆ ಬಾಲಿವುಡ್ ಅಲ್ಲೂ ಅವರೇ ಮೊದಲಲ್ಲ ಅಂತಲೂ ಹೇಳಿದ್ದಾರೆ.

ನಮ್ಮ ಕೊಡವ ಸಮುದಾಯ ಸಣ್ಣ ಸಮುದಾಯ. ಆದ್ರೇ ಎಲ್ಲಾ ರಂಗದಲ್ಲೂ ನಮ್ಮ ಸಮುದಾಯದವರಿದ್ದಾರೆ. ಸೈನ್ಯ, ಸಿನಿಮಾ, ರಾಜಕೀಯ ಎಲ್ಲಾ ರಂಗದಲ್ಲೂ ನಮ್ಮ ಸಮುದಾಯದವರಿದ್ದಾರೆ. ಕೊಡವರಲ್ಲಿ ಗಂಡು ಹೆಣ್ಣು ಎನ್ನುವ ಬೇಧವಿಲ್ಲ ಎಂದಿದ್ದಾರೆ.

Poonacha Images | kannada actress gallery | harshika-poonacha06 | Photo 6of 10

ರಶ್ಮಿಕಾ ಹೇಳಿದ್ದೇನು?
ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾತನಾಡುತ್ತಾ, ಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ (Cinema Industry) ಬಂದಿಲ್ಲ. ಸಿನಿಮಾ ಇಂಡಸ್ಟ್ರಿಗೆ ನಟಿಯಾಗಿ ಬಂದಿರೋದು ನಾನೇ ಫಸ್ಟ್ ಅನ್ನಿಸುತ್ತೆ ಎಂದು ಹೇಳಿದ್ದಾರೆ. ಈ ವೇಳೆ ಸಂದರ್ಶಕಿ ನೀವೇ ಮೊದಲು ಎಂದು ಜನ ನಿರ್ಧರಿಸಿದ್ದಾರಾ ಎಂದು ಕೇಳಿದಾಗ, ಖಂಡಿತ ಕೊಡವ ಸಮುದಾಯದವರು ಇದನ್ನು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Harshika Poonacha (aka) Harshika

ಈ ರೀತಿ ಹೇಳಿಕೆ ನೀಡುವ ಮೂಲಕ ನಟಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈಗಾಗಲೇ ಕೊಡವ ಸಮುದಾಯದಿಂದ ಸಾಕಷ್ಟು ನಾಯಕಿಯರು ಚಿತ್ರರಂಗಕ್ಕೆ ಬಂದಿದ್ದು, ಖ್ಯಾತಿಯನ್ನು ಗಳಿಸಿದ್ದಾರೆ. ನಟಿ ಪ್ರೇಮ, ನಿಧಿ ಸುಬ್ಬಯ್ಯಾ, ಹರ್ಷಿಕ ಪೂಣಚ್ಚ, ಶುಭ್ರ ಅಯ್ಯಪ್ಪ ಸೇರಿ ಹಲವರು ಬಂದಿದ್ದು, ಹೆಸರು ಮಾಡಿದ್ದಾರೆ. ಇವರೆಲ್ಲರಿಗೂ ಮುನ್ನ ನಟಿ ಪ್ರೇಮ ಹಲವು ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Image

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!