ಮಂಗಳೂರು: ತುಂಬೆ ಸಮೀಪ ಕಾರ್ ಅಪಘಾತಕ್ಕೀಡಾಗಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ಸ್ವಿಪ್ಟ್ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತನನ್ನು ಪಾವೂರಿನ ಯುವಕ ನೌಫಲ್ ಎಂದು ಗುರುತಿಸಲಾಗಿದೆ.
ಕಾರು ಬಿ.ಸಿ.ರೋಡ್‌ನಿಂದ ತುಂಬೆ ಹೋಗುತ್ತಿದ್ದ ಕಾರು ತುಂಬೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದ ಕಾರ್ ಚಾಲಕನಿಗೆ ಯಾವುದೇ ಗಾಯವಾಗದಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಾರಾಟದ ಕಾರ್ ಆಗಿದ್ದು ಲೋನ್ ಕ್ಲಿಯರೆನ್ಸ್‌ಗೆಂದು ಬ್ಯಾಂಕಿಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿತು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.