ಬೆಂಗಳೂರು: ಕನ್ನಡದ ಖ್ಯಾತ ನಟಿ ಭಾವನಾ ಮದುವೆಯಾಗದೆಯೇ ಗುಡ್ನ್ಯೂಸ್ ಕೊಟ್ಟಿದ್ದಾರೆ. ಐವಿಎಫ್ ತಂತ್ರಜ್ಞಾನ ಮೂಲಕ ತಾಯಿ ಆಗುತ್ತಿರುವ ನಟಿ ಭಾವನ ಸೋಷಿಯಲ್ ಮೀಡಿಯದಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಸಿಂಗಲ್ ಪೇರೆಂಟ್ ಆಗಿ ಎರಡು ಮಕ್ಕಳಿಗೆ ಜನ್ಮ ನೀಡಲಿರುವ ಭಾವನ ಅವರು ಎವಿಎಫ್ ಮೂಲಕ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ.
ಸಿಂಗಲ್ ಆಗಿರುವ ಭಾವನಾ ಅವರು ವಯಸ್ಸು 40 ಆದರೂ ಇನ್ನೂ ಮದುವೆಯಾಗಿಲ್ಲ. ಅವರು ವೈಯಕ್ತಿಕ ಕಾರಣಗಳಿಂದ ಸಿಂಗಲ್ ಆಗಿಯೇ ಉಳಿಯಲು ನಿರ್ಧಾರ ಮಾಡಿದ್ದರು. ಭಾವನಾ ಕನ್ನಡದ ಅನೇಕ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದರು.