ಮಂಗಳೂರು: ಬುಧವಾರ ಮಧ್ಯರಾತಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಉಳ್ಳಾಲ ವ್ಯಾಪ್ತಿಯ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಛಿದ್ರ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಂಪು ಮಣ್ಣು ನಿವಾಸಿ, ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಉದ್ಯೋಗಿ ಮೋಹನ್ ದಾಸ್ ಎಸ್. ಅಮೀನ್ ಎಂಬವರ ಪುತ್ರ ತೇಜಸ್(24) ಮೃತಪಟ್ಟ ಯುವಕ. ಈತ ರೈಲಿಗೆ ತಲೆ ಕಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವಕ್ತವಾಗಿದೆ.
ಮಣಿಪಾಲದ ವಿದ್ಯಾಸಂಸ್ಥೆಯೊಂದರಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದ ತೇಜಸ್ ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ಮೊಬೈಲ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದ. ಮನೆ ಮಂದಿ, ಸ್ಥಳೀಯರು ಈತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾದ ಹಿನ್ನೆಲೆ ನಿನ್ನೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಕಾಕತಾಳೀಯವೆಂದರೆ ನಿನ್ನೆ ಬೆಳಿಗ್ಗೆಯೇ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿ ಅಪರಿಚಿತ ಯುವಕನೋರ್ವನ ಮೃತದೇಹ ದೊರೆತ್ತಿತ್ತು. ರೈಲ್ವೇ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಇಂದು ಮೃತದೇಹದ ಪರಿಶೀಲನೆ ನಡೆಸಿದ ಮನೆಮಂದಿ ಇದು ತೇಜಸಸ್ ಮೃತದೇಹ ಎಂದು ಸ್ಪಷ್ಟಪಡಿಸಿದ್ದಾರೆ.