ಬಂಧಿತ ಟೆಕ್ಕಿ ಮೊಬೈಲ್‌ ನಲ್ಲಿ ರಾಶಿ ರಾಶಿ ಅಶ್ಲೀಲ ವಿಡಿಯೋಗಳು! ಪೊಲೀಸರೇ ಶಾಕ್!!

ಬೆಂಗಳೂರು: ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ‌ ಟೆಕ್ಕಿ ಹಾರಾಷ್ಟ್ರದ ಸಾಂಗ್ಲಿ ಮೂಲದ ಸ್ವಪ್ನಿಲ್ ನಾಗೇಶ್ ಮಾಲಿಯನ್ನು ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ರಹಸ್ಯ ವಿಡಿಯೋ ರೆಕಾರ್ಡಿಂಗ್ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದು ಆತನ ವಿಚಾರಣೆಯ ಸಂದರ್ಭ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಆತನ ಮೊಬೈಲ್‌ನಲ್ಲಿ ರಾಶಿ ರಾಶಿ ಹೆಣ್ಮಕ್ಕಳ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದೆ.
ನಾಗೇಶ್ ಮಾಲಿ ಇನ್ಫೋಸಿಸ್‌ನಲ್ಲಿ ಹಿರಿಯ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಒಬ್ಬ ಮಹಿಳಾ ಉದ್ಯೋಗಿ ಆತನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಆರೋಪಿಯು ಪಕ್ಕದ ಕಮೋಡ್‌ನ ಮೇಲೆ ನಿಂತು, ತನ್ನ ಮೊಬೈಲ್‌ನಿಂದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಈ ವೇಳೆ ಆರೋಪಿ ಸಿಕ್ಕಿಬಿದ್ದಿದ್ದ.
ಸ್ಥಳಕ್ಕೆ ಎಚ್‌ಆರ್ ಸಿಬ್ಬಂದಿ ಆಗಮಿಸಿದ್ದು, ಆರೋಪಿಯ ಮೊಬೈಲ್ ಪರಿಶೀಲನೆಯಲ್ಲಿ 30ಕ್ಕೂ ಅಧಿಕ ಮಹಿಳೆಯರ ವಿಡಿಯೋಗಳು ಮತ್ತು 50ಕ್ಕೂ ಹೆಚ್ಚು ಡೌನ್‌ಲೋಡ್ ಮಾಡಿದ ಅಶ್ಲೀಲ ವಿಡಿಯೋಗಳು ಕಂಡುಬಂದಿವೆ. ವಿಚಾರಣೆಯ ವೇಳೆ, ಆರೋಪಿಯು ʼನನಗೆ ಈ ವಿಡಿಯೋಗಳನ್ನು ನೋಡುವುದರಿಂದ ತೃಪ್ತಿ ಸಿಗುತ್ತದೆʼ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ. ಆತ ಕ್ಷಮೆಯಾಚಿಸಿದರೂ, ಎಚ್‌ಆರ್ ಸಿಬ್ಬಂದಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

error: Content is protected !!