ಬಣ್ಣದ ಲೋಕದ ಕನಸುಗಾರನ ಕರಾಳ ಅಂತ್ಯ!; ಸಿನಿರಂಗಕ್ಕೆ ಕಂಬ್ಯಾಕ್ ಮಾಡಿದ್ದ ಹರಿಮುರಳಿ ನಿಗೂಢ ಸಾವು

ಕೊಚ್ಚಿ: ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಹತ್ತಾರು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಯುವ ನಟ ಹರಿಮುರಳಿ (27) ಗುರುವಾರ (ಮಾ.12) ಕೇರಳದ ಪಯ್ಯನ್ನೂರಿನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬಾಲನಟನಾಗಿ ಜನಪ್ರಿಯತೆ:
2004ರಲ್ಲಿ ದಿಲೀಪ್ ನಟನೆಯ ‘ರಸಿಕನ್’ ಚಿತ್ರದ ಮೂಲಕ ಬಾಲನಟನಾಗಿ ಪಾದಾರ್ಪಣೆ ಮಾಡಿದ್ದ ಹರಿಮುರಳಿ, ಅಲ್ಪಕಾಲದಲ್ಲೇ ದೊಡ್ಡ ಹೆಸರು ಮಾಡಿದ್ದರು. ಮಮ್ಮುಟ್ಟಿ ನಟನೆಯ ‘ಅಣ್ಣನ್ ತಂಬಿ’, ‘ಮದಂಪಿ’ ಹಾಗೂ ‘ಪಟ್ಟಣತಿಲ್ ಭೂತಂ’ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ಮಿಂಚಿದ್ದರು.

ಮಮ್ಮುಟ್ಟಿಗೆ ಆಕ್ಷನ್ ಕಟ್ ಹೇಳುವ ಕನಸು ಕಂಡಿದ್ದ ನಟ:
ಶಿಕ್ಷಣಕ್ಕಾಗಿ ನಟನೆಯಿಂದ ಬ್ರೇಕ್ ಪಡೆದಿದ್ದ ಇವರು, ನಂತರ ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ಅಮರ್ ಅಕ್ಬರ್ ಆಂಟನಿ’ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ, ವಿಎಫ್‌ಎಕ್ಸ್‌ (VFX) ಆರ್ಟಿಸ್ಟ್ ಆಗಿಯೂ ಗುರುತಿಸಿಕೊಂಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮೆಗಾಸ್ಟಾರ್ ಮಮ್ಮುಟ್ಟಿ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬ ತಮ್ಮ ದೊಡ್ಡ ಕನಸನ್ನು ಹಂಚಿಕೊಂಡಿದ್ದರು. ಆದರೆ ಆ ಕನಸು ನನಸಾಗುವ ಮೊದಲೇ ಹರಿಮುರಳಿ ಇಹಲೋಕ ತ್ಯಜಿಸಿದ್ದಾರೆ.

ಸದ್ಯಕ್ಕೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ. ಯುವ ನಟನ ನಿಧನಕ್ಕೆ ಮಲಯಾಳಂ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

error: Content is protected !!