ಪುತ್ತೂರು: ಹಿಂದೂ ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ ನೇತೃತ್ವದ ನಿಯೋಗದಲ್ಲಿ ಕಾರ್ಯಕರ್ತರು ಅತ್ಯಾಚಾರ, ವಂಚನೆಗೊಳಪಟ್ಟ ಆರೋಪ ಪ್ರಕರಣದ ಸಂತ್ರಸ್ಥೆ ಮನೆಗೆ ಭೇಟಿ ಕೊಟ್ಟು ಸಂತ್ರಸ್ತೆಯ ತಾಯಿ ಮತ್ತು ಸಂತ್ರಸ್ತೆಗೆ ಸಾಂತ್ವಾನ ನೀಡಿದ್ದಾರೆ.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಹಸಂತಡ್ಕ ಅವರು, ಪ್ರಕರಣ ಬೆಳಕಿಗೆ ಬಂದಾಗಲೇ ಹೆಣ್ಣಿಗೆ ನ್ಯಾಯ ಕೊಡಿಸುವ ಬಗ್ಗೆ ಚರ್ಚಿಸಿದ್ದೇವೆ. ಆ ಸಂದರ್ಭದಲ್ಲಿ ಕೇಸು ಒಂದೇ ಪರಿಹಾರವಲ್ಲ. ಎರಡು ಮನಸ್ಸುಗಳನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಬೇಕೆಂದು ಹೇಳಿದ್ದೇವೆಯೇ ಹೊರತು ಅಬರ್ಷನ್ ಮಾಡಬೇಕೆಂದು ಹೇಳಿಲ್ಲ. ಹಣದ ಆಮಿಷವನ್ನೂ ನೀಡಿಲ್ಲ. ಇದು ರಸ್ತೆಯಲ್ಲಿ ನಿಂತು ಮಾತನಾಡುವ ವಿಚಾರವಲ್ಲ. ನಾವು ಹೆಣ್ಣಿಗೆ ನ್ಯಾಯ ಸಿಗುವ ತನಕ ಅವರೊಂದಿಗೆ ಸ್ಪಷ್ಟವಾಗಿ ಇರುತ್ತೇವೆ ಎಂದು ಹೇಳಿದ್ದಾರೆ. ನ್ಯಾಯ ಸಿಗುವ ತನಕ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು
ಈ ವೇಳೆ ಮಾತನಾಡಿದ ಸಂತ್ರಸ್ಥೆಯ ತಾಯಿ, ನಾನು ಯಾವ ಸಂಘಟನೆಯಲ್ಲೂ ಇಲ್ಲ, ಮಗುವಿಗೆ ಅಪ್ಪನ ಸ್ಥಾನ ಕೊಡಿಸಿ ಎಂದು ಹೇಳಿದರು. ಈ ಸಂದರ್ಭ ಬಜರಂಗದಳ, ವಿಶ್ವಹಿಂದೂ ಪರಿಷದ್ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.