ದೆಹಲಿ: ಜನನಿಬಿಡ ದಕ್ಷಿಣ ದೆಹಲಿಯ ಲಜಪತ್ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ, ಮಗನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಳೆದ ರಾತ್ರಿ ಮನೆಯ ಕಾರ್ ಡೈವರ್ ನಿಂದಲೇ ಈ ಕೃತ್ಯ ನಡೆದಿದೆ. ಮನೆ ಕೆಲಸದ ವಿಷಯಕ್ಕೆ ಬೈದ್ದಿದ್ದಕ್ಕೆ ಪ್ರತಿಯಾಗಿ ರುಚಿಕಾ ಶೈವಾನಿ ಮತ್ತಾಕೆಯ 14 ವರ್ಷದ ಮಗ ಕ್ರಿಶ್ನನ್ನು ಮುಖೇಶ್ ಸಾಯಿಸಿದ್ದು, ರುಚಿಕಾ ಪತಿ ಕುಲದೀಪ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಜಪತ್ ನಗರ ಮಾರ್ಕೆಟ್ನಲ್ಲಿ ಕುಲದೀಪ್, ರುಚಿಕಾ ದಂಪತಿ ಬಟ್ಟೆ ಅಂಗಡಿ ಹೊಂದಿದ್ದು ಇವರ ಮನೆಯಲ್ಲಿ ಮನೆ ಕೆಲಸ, ಕಾರ್ ಡ್ರೈವರ್ ಆಗಿ ಮುಖೇಶ್ ಕೆಲಸ ಮಾಡುತ್ತಿದ್ದ. ಕೃತ್ಯ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದ ಮುಖೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಹೆಚ್ಚಿನ ತನಿಖೆಯನ್ನು ಲಜಪತ್ ನಗರ ಪೊಲೀಸರು ನಡೆಸುತ್ತಿದ್ದಾರೆ. ಬಿಹಾರ ರಾಜ್ಯದ ಮುಖೇಶ್ ಕಾರ್ ಡ್ರೈವಿಂಗ್, ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಲಜಪತ್ ನಗರ ಪಕ್ಕದ ಅಮರ್ ಕಾಲೋನಿಯಲ್ಲಿ ವಾಸವಿದ್ದ. ನಿನ್ನೆ ತಡರಾತ್ರಿ ಕುಲದೀಪ್ ಮನೆಗೆ ಬಂದಾಗ ಮೆಟ್ಟಿಲ ಬಳಿ ರಕ್ತದ ಕಲೆಗಳು ಕಂಡಿವೆ. ಪತ್ನಿ ರುಚಿಕಾ ಕಣ್ಣಿಗೆ ಕಾಣಿಸಿಲ್ಲ. ಮನೆಯ ಬಾಗಿಲು ಹಾಕಿದ್ದು ಕುಲದೀಪ್ ತನ್ನ ಪತ್ನಿ, ಮಗ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ, ಮನೆಯ ಹಾಲ್ನಲ್ಲಿ ರುಚಿಕಾ ಶವ ಮತ್ತು ಕ್ರಿಶ್ ಶವ ಬಾತ್ ರೂಮುನಲ್ಲಿ ಪತ್ತೆಯಾಗಿದೆ.